ಕೇಂದ್ರ ಸರ್ಕಾರಿ ನೌಕರರಿಗೆ ಡಿಎಗೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದ ಹೊರಬಿದ್ದಿದೆ. ಶೀಘ್ರದಲ್ಲೇ ಲಕ್ಷಾಂತರ ಉದ್ಯೋಗಿಗಳಿಗೆ ಹೆಚ್ಚಿದ ಡಿಎ ಸಿಗಲಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಜಾಯಿಂಟ್ ಕನ್ಸಲ್ಟೇಟಿವ್ ಮೆಷಿನರಿ ಈ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಈ ಸಭೆಯಲ್ಲಿ ನೌಕರರ ಡಿಎ ಕುರಿತು ಚರ್ಚೆ ನಡೆಯಲಿದೆ. ಹಣಕಾಸು ಸಚಿವಾಲಯದ ಹೊರತಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕಾರಿಗಳೂ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸರ್ಕಾರದೊಂದಿಗಿನ ಮೇ ತಿಂಗಳಲ್ಲಿಯೇ ಈ ಸಭೆ ನಡೆಯಬೇಕಿತ್ತು. ದೇಶಾದ್ಯಂತ ಹರಡಿರುವ ಕೊರೊನಾ ಬಿಕ್ಕಟ್ಟಿನಿಂದಾಗಿ ಈ ಸಭೆಯನ್ನು ಮುಂದೂಡಲಾಗಿತ್ತು.
ಈಗ ಜೂನ್ ಎರಡನೇ ಅಥವಾ ಮೂರನೇ ವಾರದಲ್ಲಿ ನಡೆಸುವ ಸಾಧ್ಯತೆ ದಟ್ಟವಾಗಿದೆ. ನೌಕರರ ಡಿಎ ಮೂರು ಕಂತುಗಳು ಬಾಕಿ ಉಳಿದಿದ್ದು, ಅದನ್ನು ಸರ್ಕಾರ ಪಾವತಿಸಬೇಕಿದೆ. ಜನವರಿ 1, 2020, ಜುಲೈ 1, 2020 ಮತ್ತು ಜನವರಿ 1, 2021 ರ ನೌಕರರು ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ಬಾಕಿ ಉಳಿದಿದೆ.
ನೌಕರರಿಗೆ ಪ್ರಸ್ತುತ ಶೇಕಡಾ 17 ರ ದರದಲ್ಲಿ ಡಿಎ ಪಾವತಿಸಲಾಗುತ್ತಿದೆ. ಇದು ಶೇಕಡಾ 11ರಷ್ಟು ಹೆಚ್ಚಾಗಲಿದ್ದು, ಶೇಕಡಾ 28 ರಷ್ಟು ಡಿಎ ನೌಕರರಿಗೆ ಸಿಗುವ ಸಾಧ್ಯತೆಯಿದೆ.