alex Certify ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಮತ್ತೊಂದು ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರದ ಈ ಉದ್ಯೋಗಿಗಳಿಗೆ ಮತ್ತೊಂದು ‘ಗುಡ್ ನ್ಯೂಸ್’

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಈ ವರ್ಷ ಬಂಪರ್ ಕೊಡುಗೆ ಸಿಕ್ಕಿದೆ. 7 ನೇ ವೇತನ ಆಯೋಗದ ಅಡಿಯಲ್ಲಿ ವೇತನ ಪಡೆಯುವ ಉದ್ಯೋಗಿಗಳಿಗೆ ಜುಲೈನಲ್ಲಿ ಡಿಎ ಹೆಚ್ಚಳವಾಗಿದೆ. 7ನೇ ವೇತನ ಆಯೋಗದಡಿ ಬರದ ಕೆಲ ನೌಕರರಿಗೂ ಡಿಎ ಹೆಚ್ಚಳವಾಗಿದೆ.

ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಭಾರತೀಯ ರೈಲ್ವೆಯ ಕೆಲವು ಉದ್ಯೋಗಿಗಳು ಪ್ರಸ್ತುತ ಆರನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಾರೆ. ಇತ್ತೀಚೆಗೆ ಈ ಉದ್ಯೋಗಿಗಳ ಡಿಎ ಹೆಚ್ಚಿಸಲಾಗಿದೆ.  ಈ ಉದ್ಯೋಗಿಗಳ ಡಿಎಯನ್ನು ಶೇಕಡಾ 25 ರಷ್ಟು ಹೆಚ್ಚಿಸಲಾಗಿದೆ.

7 ನೇ ವೇತನ ಆಯೋಗದಡಿ ಬರದೆ ಹೋದ್ರೂ ಈ ಉದ್ಯೋಗಿಗಳ ವೇತನದಲ್ಲಿ ಬಂಪರ್ ಹೆಚ್ಚಳವಾಗಿದೆ. ಮೋದಿ ಸರ್ಕಾರ, ಒಂದೂವರೆ ವರ್ಷಗಳ ನಂತರ ಡಿಎ ನೀಡ್ತಿದೆ. ಆರನೇ ವೇತನ ಆಯೋಗದ ಅಡಿಯಲ್ಲಿ, ಉದ್ಯೋಗಿಗಳು ಶೇಕಡಾ 164ರ ಬದಲು ಶೇಕಡಾ 189ರಷ್ಟು ಡಿಎ ಪಡೆಯುತ್ತಾರೆ.

ಭಾರತೀಯ ರೈಲ್ವೇಸ್ ಮತ್ತು ಸಿಪಿಎಸ್‌ಇ ಉದ್ಯೋಗಿಗಳಿಗೆ ಸೆಪ್ಟೆಂಬರ್ ತಿಂಗಳ ಸಂಬಳದಲ್ಲಿ ಹೆಚ್ಚಿನ ಡಿಎ ಸಿಗಲಿದೆ.

ಲೆಕ್ಕಾಚಾರದ ಪ್ರಕಾರ, ಈ ಉದ್ಯೋಗಿಗಳ ಗರಿಷ್ಠ ಮೂಲ ವೇತನ ತಿಂಗಳಿಗೆ 90,000 ರೂಪಾಯಿ. ಇದರ ಮೇಲೆ ಡಿಎ ಶೇಕಡಾ 164ರ ದರದಲ್ಲಿ 1,47,600 ರೂಪಾಯಿ ಸಿಗ್ತತ್ತು. ಈಗ ಶೇಕಡಾ 25ರಷ್ಟು ಡಿಎ ಹೆಚ್ಚಳವಾಗಿದೆ. ಅಂದ್ರೆ ನೌಕರರಿಗೆ 90,000 ಗರಿಷ್ಠ ಮೂಲ ವೇತನದ ನೌಕರರಿಗೆ ತಿಂಗಳಿಗೆ 1,70,100 ರೂಪಾಯಿ ಡಿಎ ಸಿಗಲಿದೆ. ಅಂದ್ರೆ ಡಿಎ 22,500 ರೂಪಾಯಿ ಏರಿಕೆಯಾಗಲಿದೆ. ಸಿಪಿಸಿ ನೌಕರರ ಕನಿಷ್ಠ ಮೂಲ ವೇತನ ತಿಂಗಳಿಗೆ 7000 ರೂಪಾಯಿ. ಅವರ ಡಿಎ 1750 ರೂಪಾಯಿಗಳಷ್ಟು ಹೆಚ್ಚಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...