ಕೇಂದ್ರ ಸರ್ಕಾರಿ ನೌಕರರಿಗೆ ಹೋಳಿ ಹಬ್ಬದ ಬಂಪರ್ ಸುದ್ದಿ ನೀಡಲು ಮುಂದಾಗಿರುವ ಕೇಂದ್ರವು, ತುಟ್ಟಿ ಭತ್ಯೆ ಹಾಗೂ ತುಟ್ಟಿ ನಿರಾಳತೆ (ನಿವೃತ್ತ ನೌಕರರಿಗೆ) ಹೆಚ್ಚಿಸುವ ನಿರೀಕ್ಷೆ ಇದೆ. ವೇತನ ಹೆಚ್ಚಳ ಸಂಬಂಧ ಸರ್ಕಾರವು ಮಹತ್ವದ ಘೋಷಣೆ ಮಾಡಿತ್ತು.
ಈಗ ಘೋಷಿಸಿರುವ 4% ಹೆಚ್ಚಳದೊಂದಿಗೆ ತುಟ್ಟಿ ಭತ್ಯೆಯಲ್ಲಿ ಒಟ್ಟಾರೆ 21% ಹೆಚ್ಚಳವಾಗಿದೆ. ಸದ್ಯ ಕೇಂದ್ರ ಸರ್ಕಾರಿ ನೌಕರರಿಗೆ ವೇತನದ 17% ಮೊತ್ತವನ್ನು ತುಟ್ಟಿ ಭತ್ಯೆ ರೂಪದಲ್ಲಿ ಕೊಡಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರದ ಹುದ್ದೆಗಳಲ್ಲಿರುವ 48 ಲಕ್ಷದಷ್ಟು ನೌಕರರ ಕೈಗೆ ಬರುವ ಸಂಬಳದಲ್ಲಿ ಏರಿಕೆಯಾಗಲಿದೆ. ಇದೆ ವೇಳೆ ತುಟ್ಟಿ ನಿರಾಳತೆಯ ರೂಪದಲ್ಲಿ ಏರಿಕೆ ಆದಲ್ಲಿ, ಕೇಂದ್ರ ಸರ್ಕಾರದ ಪಿಂಚಣಿ ತೆಗೆದುಕೊಳ್ಳುತ್ತಿರುವ 65 ಲಕ್ಷ ಮಂದಿಗೆ ಲಾಭವಾಗಲಿದೆ.
ಇಲ್ಲಿದೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ರಹಸ್ಯ: ‘ಭಾರೀ ಸುಂಕ’ ಕಡಿತಕ್ಕೆ ಆಗ್ರಹ
ಅರಿಯರ್ಸ್ ರೂಪದ ವೇತನದಲ್ಲಿ ಇನ್ನೂ 4% ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳ ವರದಿಗಳು ತಿಳಿಸುತ್ತಿವೆ. ಈ ಮೂಲಕ ತುಟ್ಟಿ ಭತ್ಯೆಯು ಮೂಲ ವೇತನದ 25%ಗೆ ಏರಿಕೆ ಮಾಡಿದಂತೆ ಆಗಲಿದೆ. ಏಳನೇ ವೇತನಾ ಆಯೋಗದ ಶಿಫಾರಸಿನಂತೆ ಈ ಏರಿಕೆಯನ್ನು ಮಾಡಲಾಗುತ್ತಿದೆ.