ನವದೆಹಲಿ: 7ನೇ ವೇತನ ಆಯೋಗದ ಅನ್ವಯ ಕೇಂದ್ರ ಸರ್ಕಾರಿ ನೌಕರರ ಡಿಎ, ಹೆಚ್.ಆರ್.ಎ. ಹೆಚ್ಚಳವಾಗುವ ಸಾಧ್ಯತೆ ಇದೆ.
ವೇತನ ಸಂಹಿತೆ ಮಸೂದೆ ಅನ್ವಯ ಡಿಎ, ಪ್ರಯಾಣ ಭತ್ಯೆ ಮತ್ತು ಮನೆ ಬಾಡಿಗೆ ಭತ್ಯೆ ಹೆಚ್ಚಳವಾಗಲಿದೆ. ಏಪ್ರಿಲ್ 1 ರಿಂದ ಹೊಸ ವೇತನ ಸಂಹಿತೆ ಮಸೂದೆ ಜಾರಿಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ.
ಹೊಸ ವೇತನ ಸಂಹಿತೆ ಜಾರಿಗೆ ಜಾರಿಗೆ ಬಂದ ನಂತರ ಮಾಸಿಕ ಪಿಎಫ್ ಮತ್ತು ಗ್ರಾಚುಟಿ ಕೊಡುಗೆಯನ್ನು ಮಾಸಿಕ ಮೂಲ ಮತ್ತು ಡಿಎ ಮೇಲೆ ಹಾಕುವುದರಿಂದ ಪಿಎಫ್ ಮತ್ತು ಗ್ರಾಚುಟಿ ಕೂಡ ಬದಲಾಗಲಿದೆ. ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ ನಿವ್ವಳ ಸಿಟಿಸಿಯ ಕನಿಷ್ಠ 50 ಪ್ರತಿಶತದಷ್ಟಾಗುತ್ತದೆ ಎಂದು ಹೇಳಲಾಗಿದೆ.