ನರೇಂದ್ರ ಮೋದಿ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಈಗಾಗಲೇ ಡಿಎ ಸೇರಿದಂತೆ ಅನೇಕ ಭತ್ಯೆ ಹೆಚ್ಚಳ ಘೋಷಣೆ ಮಾಡಿರುವ ಮೋದಿ ಸರ್ಕಾರ ಈಗ ಕೆಲ ಉದ್ಯೋಗಿಗಳಿಗೆ ಬಡ್ತಿ ನೀಡುವ ಘೋಷಣೆ ಮಾಡಿದೆ.
ಕೇಂದ್ರ ಸರ್ಕಾರಿ ಉದ್ಯೋಗಿಗಳ ಬಡ್ತಿಯ ವಿನಂತಿಯನ್ನು ಸರ್ಕಾರ ಸ್ವೀಕರಿಸಿದ ಎನ್ನಲಾಗಿದೆ. 7 ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಭಾರತೀಯ ರೈಲ್ವೇಯ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ.
ಸರ್ಕಾರದ ಆದೇಶದ ಪ್ರಕಾರ, ಈ ವರ್ಷ ರೈಲ್ವೇ ಬೋರ್ಡ್ ಸೆಕ್ರೆಟರಿಯೇಟ್ ಸರ್ವೀಸ್, ರೈಲ್ವೇ ಬೋರ್ಡ್ ಸೆಕ್ರೆಟರಿಯಟ್ ಸ್ಟೆನೋಗ್ರಾಫರ್ ಸರ್ವೀಸ್ ನ ಅಧಿಕಾರಿಗಳಿಗೆ ಬಡ್ತಿ ನೀಡಲಿದೆ.
ಬಡ್ತಿಯೊಂದಿಗೆ ಅಧಿಕಾರಿಗಳ ಸಂಬಳ ತಿಂಗಳಿಗೆ ಸುಮಾರು 15,000 ರೂಪಾಯಿ ಹೆಚ್ಚಾಗಲಿದೆ. 67,700 ರೂಪಾಯಿ ಮೂಲ ವೇತನ ಹೊಂದಿರುವ ನೌಕರರ ಸಂಬಳ 78,800 ರೂಪಾಯಿಯಾಗಲಿದೆ.
ಮೂಲ ವೇತನ ಹೆಚ್ಚಾದ್ರೆ, ಡಿಎ,ಸಾರಿಗೆ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಇತರ ಭತ್ಯೆ ಹೆಚ್ಚಾಗಲಿದೆ.