ಮೋದಿ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಉಡುಗೊರೆ ನೀಡಿದೆ. ಜನವರಿ 2020 ಮತ್ತು ಜೂನ್ 2021 ರ ನಡುವೆ ನಿವೃತ್ತಿ ಹೊಂದಿದ ಉದ್ಯೋಗಿಗಳಿಗೆ ಸರ್ಕಾರ, ದೊಡ್ಡ ಉಡುಗೊರೆ ನೀಡಿದೆ. ಸರ್ಕಾರ ಈ ನಿವೃತ್ತ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸುವ ಘೋಷಣೆ ಮಾಡಿದೆ.
ಇದ್ರಿಂದ ನಿವೃತ್ತ ನೌಕರರಿಗೆ ಲಾಭವಾಗಲಿದೆ. ನಿವೃತ್ತಿ ನಿಧಿಯಲ್ಲಿ ಸುಮಾರು 1 ಲಕ್ಷದಿಂದ 7 ಲಕ್ಷ ರೂಪಾಯಿಗಳ ಲಾಭವಾಗಲಿದೆ. ಸರ್ಕಾರಿ ಉದ್ಯಮಗಳು, ಡಿಯರ್ನೆಸ್ ಭತ್ಯೆಯಲ್ಲಿ ಪ್ರಯೋಜನ ಪಡೆಯಲಿದ್ದಾರೆ. ರೈಲ್ವೆ ಉದ್ಯೋಗಿಗಳು ಸೇರಿದಂತೆ ಸಿಪಿಎಸ್‌ಇಗಳ ಉದ್ಯೋಗಿಗಳು ಈ ಪ್ರಯೋಜನವನ್ನು ಪಡೆಯಲಿದ್ದಾರೆ.
ನಿವೃತ್ತ ನೌಕರರಿಗೆ ಶೇಕಡಾ 11 ರಷ್ಟು ಡಿಎ ಲಾಭ ನೀಡಲು ಸರ್ಕಾರ ಒಪ್ಪಿಕೊಂಡಿದೆ. ಕಿರಿಯರಿಂದ ಹಿರಿಯ ಹಂತದವರೆಗಿನ ಎಲ್ಲ ಉದ್ಯೋಗಿಯು, ನಿವೃತ್ತಿ ನಿಧಿಯಲ್ಲಿ ಸುಮಾರು 1 ಲಕ್ಷದಿಂದ 7 ಲಕ್ಷದವರೆಗೆ ಪ್ರಯೋಜನ ಪಡೆಯಲಿದ್ದಾರೆ. ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಗಳಿಗೆ ಈಗಾಗಲೇ ಡಿಎ ಹೆಚ್ಚಳದ ಪ್ರಯೋಜನವನ್ನು ನೀಡಲಾಗಿದೆ. ಇದ್ರ ನಂತ್ರ ಉಳಿದ ಇಲಾಖೆಗಳು ಇದರ ಲಾಭವನ್ನು ಪಡೆಯಲಿವೆ. ರೈಲ್ವೆಯ ಎಲ್ಲಾ ವಲಯಗಳ ನಿವೃತ್ತ ಉದ್ಯೋಗಿಗಳು ಇದರ ಅಡಿಯಲ್ಲಿ ಬರಲಿದ್ದಾರೆಂದು ಭಾರತೀಯ ರೈಲ್ವೆಯ ವೇತನ ಆಯೋಗದ ಉಪನಿರ್ದೇಶಕ ಜೈ ಕುಮಾರ್ ಹೇಳಿದ್ದಾರೆ.