ಕೇಂದ್ರ ಸರ್ಕಾರಿ ನೌಕರರಿಗೆ ಹೆಚ್ಚಿನ ತುಟ್ಟಿಭತ್ಯೆ ಸಿಗಲಿದೆ. ಆದ್ರೆ ಮತ್ತೊಂದು ಕಡೆ ನಿರಾಸೆಯಾಗಿದೆ. ಕೇಂದ್ರ ನೌಕರರ, ಮಾಸಿಕ ಮೂಲ ವೇತನ ಹೆಚ್ಚಿಸುವ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ನಿಲುವು ಕೈಗೊಂಡಿದೆ.
ಮೊಟ್ಟೆ ಯೋಜನೆಯಿಂದ ಧಾರ್ಮಿಕ ನಂಬಿಕೆಗೆ ಧಕ್ಕೆ; ಯೋಜನೆ ಹಿಂಪಡೆಯುವಂತೆ ಹಲವು ಸಮುದಾಯಗಳ ಆಗ್ರಹ
ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ, ಮಾಸಿಕ ಮೂಲ ವೇತನ ಹೆಚ್ಚಿಸುವ ಯಾವುದೇ ಯೋಜನೆಯನ್ನು ಪರಿಗಣಿಸುತ್ತಿಲ್ಲ ಎಂದಿದ್ದಾರೆ. 7ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ತುಟ್ಟಿಭತ್ಯೆ ಹೆಚ್ಚಿಸಿದ ನಂತರ ನೌಕರರ ಮಾಸಿಕ ಮೂಲ ವೇತನ ಹೆಚ್ಚಿಸುವ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು ಎಂಬ ಪ್ರಶ್ನೆಗೆ ಪಂಕಜ್ ಚೌಧರಿ ಉತ್ತರ ನೀಡಿದರು.
ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಹೆಚ್ಚಳವಾಗಿದೆ. ಮೊದಲು ಕೇಂದ್ರ ನೌಕರರು ಶೇಕಡಾ 17ರಷ್ಟು ಡಿಎ ಪಡೆಯುತ್ತಿದ್ದರು. ಜುಲೈ 1, 2021 ರಿಂದ ಇದನ್ನು ಶೇಕಡಾ 28ಕ್ಕೆ ಹೆಚ್ಚಿಸಲಾಗಿದೆ. ನಂತ್ರ ಮತ್ತೆ ತುಟ್ಟಿ ಭತ್ಯೆ ಹೆಚ್ಚಾಗಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯೆ ಶೇಕಡಾ 3ರಷ್ಟು ಹೆಚ್ಚಾಗಿದೆ. ಈಗ ಒಟ್ಟು ಶೇಕಡಾ 31ರಷ್ಟು ತುಟ್ಟಿಭತ್ಯೆ ಸಿಗಲಿದೆ. ಈ ತಿಂಗಳ ಸಂಬಳದಲ್ಲಿ ನೌಕರರಿಗೆ ಈ ಹಣ ಸಿಗುವ ಸಾಧ್ಯತೆಯಿದೆ.