alex Certify ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್​ನ್ಯೂಸ್​: ಶೀಘ್ರದಲ್ಲೇ ತುಟ್ಟಿಭತ್ಯೆ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಗುಡ್​ನ್ಯೂಸ್​: ಶೀಘ್ರದಲ್ಲೇ ತುಟ್ಟಿಭತ್ಯೆ ಏರಿಕೆ

ಮುಂದಿನ ಬಾರಿ ಯಾವಾಗ ಡಿಎ ಹಾಗೂ ಡಿಆರ್​ ಹೆಚ್ಚಳವಾಗುತ್ತೆ ಎಂದು ಲಕ್ಷಗಟ್ಟಲೇ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಕಾಯುವಿಕೆಗೆ ಶೀಘ್ರದಲ್ಲೇ ಅಂತ್ಯ ಕಾಣುವ ಎಲ್ಲಾ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರವು 2023ನೇ ಸಾಲಿನ ಎರಡನೇ ಡಿಎ ಹೆಚ್ಚಳವನ್ನು ಇನ್ನೊಂದು ತಿಂಗಳ ಅವಧಿಯಲ್ಲಿ ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ಡಿಎ ಹೆಚ್ಚಳದ ಘೋಷಣೆಯು ಸೆಪ್ಟೆಂಬರ್​ ಅಂತ್ಯದಲ್ಲಿ ಅಥವಾ ನವರಾತ್ರಿಯ ಸಂದರ್ಭದಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ.

ಕೇಂದ್ರ ಸಚಿವ ಸಂಪುಟವು ಈ ಬಾರಿ ಶೇಕಡಾ 3ರಷ್ಟು ಡಿಎ ಹೆಚ್ಚಳಕ್ಕೆ ಹಸಿರು ನಿಶಾನೆ ತೋರುವ ನಿರೀಕ್ಷೆ ಇದೆ ಎನ್ನಲಾಗಿದೆ. ಈ ಮೂಲಕ ಪ್ರಸ್ತುತ 42 ಪ್ರತಿಶತ ಇರುವ ಡಿಎ 45 ಪ್ರತಿಶತಕ್ಕೆ ಏರಿಕೆ ಕಾಣಲಿದೆ.

2023ರ ಎರಡನೇ ಡಿಎ ಹೆಚ್ಚಳ ಯಾವಾಗ ಘೋಷಣೆ ಆದರೂ ಸಹ ಇದು 2023ರ ಜುಲೈ 1ಕ್ಕೆ ಪೂರ್ವಾನ್ವಯಗೊಳ್ಳಲಿದೆ. ನೌಕರರು ಡಿಎ 4 ಪ್ರತಿಶತ ಏರಿಕೆ ಬೇಕು ಎಂದು ನಿರೀಕ್ಷೆ ಮಾಡುತ್ತಿದ್ದರೂ ಸಹ ಕೇಂದ್ರ ಸರ್ಕಾರ 3 ಪ್ರತಿಶತ ಏರಿಕೆ ಮಾಡಬಹುದು ಎನ್ನಲಾಗಿದೆ. ಅದೇನೆ ಇರ್ಲಿ ಡಿಎ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಪಾಲಿಗೆ ಖಂಡಿತವಾಗಿಯೂ ಒಂದು ಬಂಪರ್​ ಆಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...