ಸರಕಾರಿ ನೌಕರರೊಬ್ಬರು ಹಠಾತ್ತಾಗಿ ಸಾವಿಗೀಡಾದರೆ, ಅವರೊಬ್ಬರೇ ಕುಟುಂಬಕ್ಕೆ ಆರ್ಥಿಕ ನೆರವಿನ ಬೆಂಬಲವಾಗಿದ್ದರೆ, ಅಂಥ ಕುಟುಂಬಗಳು ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಬೇಕಿಲ್ಲ.
ಕೇಂದ್ರ ಸರಕಾರವು ಸಂತ್ರಸ್ತ ಕುಟುಂಬಗಳಿಗೆ ಕೂಡಲೇ ಅನುಕೂಲ ಕಲ್ಪಿಸಲು ಕೌಟುಂಬಿಕ ಪಿಂಚಣಿಗೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ, ಪಿಂಚಣಿ ಪಡೆಯಲು ಅವಕಾಶ ಕಲ್ಪಿಸಿದೆ. ಇದಲ್ಲದೇ 7ನೇ ವೇತನ ಆಯೋಗದ ಅಡಿಯಲ್ಲಿನ ಕೌಟುಂಬಿಕ ಪಿಂಚಣಿಗೆ ಆದಾಯ ತೆರಿಗೆ ವಿನಾಯಿತಿಯನ್ನು ಒದಗಿಸಲಾಗಿದೆ.
ಮೃತ ನೌಕರನ ಕುಟುಂಬಸ್ಥರು ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸುವಾಗ ಅಧಿಕೃತ ಮರಣ ಪ್ರಮಾಣಪತ್ರವನ್ನು ತಪ್ಪದೇ ನೀಡಬೇಕಿದೆ. ನೌಕರರು ತೆಗೆದುಕೊಂಡ ಕೊನೆಯ ಸರಕಾರಿ ವೇತನವನ್ನು ಆಧರಿಸಿ, ಕೌಟುಂಬಿಕ ಪಿಂಚಣಿಯನ್ನು ಸರಕಾರವು ನಿಗದಿಪಡಿಸುತ್ತದೆ.
ಇಲ್ಲಿದೆ ತಲೆ ಹೊಟ್ಟಿನ ಸಮಸ್ಯೆಗೆ ಶಾಶ್ವತ ಪರಿಹಾರ
ಒಂದು ವೇಳೆ ಕೌಟುಂಬಿಕ ಪಿಂಚಣಿ ನಿಗದಿಪಡಿಸುವ ವೇಳೆ ಸಿಬ್ಬಂದಿಯಿಂದ ಲೆಕ್ಕಾಚಾರ ಅಥವಾ ಟೈಪಿಂಗ್ ದೋಷಗಳು ಆಗಿದ್ದಲ್ಲಿ ಪಿಂಚಣಿ ನಿಯಮಗಳ 8 ಹಾಗೂ 9ನೇ ವಿಭಾಗದ ಅಡಿಯಲ್ಲಿ ಸಂತ್ರಸ್ತರು ಮರುಪರಿಶೀಲನೆಗೂ ಆಗ್ರಹಿಸಲು ಅವಕಾಶವಿದೆ.
ಒಂದು ವೇಳೆ ಲೆಕ್ಕಾಚಾರ ತಪ್ಪಾಗಿದ್ದು ಪಿಂಚಣಿ ಪಾವತಿಯಾದ 2 ವರ್ಷಗಳ ನಂತರ ಪ್ರಸ್ತಾವನೆ ಆದಲ್ಲಿ, ಪಿಂಚಣಿ ಪರಿಷ್ಕರಣೆಗೆ ಆದೇಶಿಸಲು ಬರುವುದಿಲ್ಲ. ಕೇಂದ್ರ ಸರ್ಕಾರಿ ನೌಕರರಿಗೆ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ನಿಗದಿಪಡಿಸುವ ಪೂರ್ಣ ಅಧಿಕಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯದ ಅಡಿಯಲ್ಲಿನ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ ಮಾತ್ರವೇ ಹೊಂದಿದೆ. ಆಡಳಿತಕ್ಕೆ ಸಂಬಂಧಿಸಿದ ಯಾವುದೇ ಸಚಿವಾಲಯಗಳು ಪಿಂಚಣಿ ವಿಚಾರದಲ್ಲಿ ಮೂಗು ತೂರಿಸಲು ಬರಲ್ಲ.