ನವದೆಹಲಿ: ಬಹು ನಿರೀಕ್ಷಿತ ತುಟ್ಟಿಭತ್ಯೆ(ಡಿಎ) ಹೆಚ್ಚಳದ ಬಗ್ಗೆ ನಿರ್ಧಾರ ಕೈಗೊಂಡಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಸಿಹಿ ಸುದ್ದಿ ಸಿಗಲಿದೆ.
ತಿಂಗಳ ವಿಶ್ಲೇಷಣೆ, ವರದಿಗಳು ಮತ್ತು ಊಹಾಪೋಹಗಳ ನಂತರ ಕೇಂದ್ರ ಸರ್ಕಾರದ ನೌಕರರಿಗೆ ಶೇಕಡ 4 ಡಿಎ ಹೆಚ್ಚಳವನ್ನು ನಿರ್ಧರಿಸಲಾಗಿದೆ. ಹೆಚ್ಚಳದ ನಂತರ ಡಿಎ 38 ಪ್ರತಿಶತಕ್ಕೆ ಹೆಚ್ಚಳವಾಗುತ್ತದೆ. ಶೇಕಡ 4 ರಷ್ಟು ಡಿಎ ಹೆಚ್ಚಳಕ್ಕೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಕಟಣೆಯ ದಿನಾಂಕ ಮತ್ತು ಇತರ ವಿವರಗಳ ಅಧಿಕೃತ ನವೀಕರಣಕ್ಕಾಗಿ ಕಾಯಲಾಗುತ್ತಿದೆ.
ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಕೈಗಾರಿಕಾ ಕಾರ್ಮಿಕರ ದತ್ತಾಂಶವನ್ನು ಬಿಡುಗಡೆ ಮಾಡಿದ ನಂತರ ಅದರ ಆಧಾರದ ಮೇಲೆ DA ಪರಿಷ್ಕರಣೆ ಮಾಡಲಾಗುತ್ತದೆ. ಜೂನ್‌ನಲ್ಲಿ 0.2 ಅಂಕಗಳ ಏರಿಕೆಯೊಂದಿಗೆ ಸೂಚ್ಯಂಕ 129.2 ರಷ್ಟಿತ್ತು.
ಹೊಸ ಡಿಎ ಅಂಕಿ ಅಂಶಗಳ ಪ್ರಕಾರ ಹೆಚ್ಚಿದ ಪಾವತಿಯು ಮುಂದಿನ ತಿಂಗಳು ನೌಕರರ ಬ್ಯಾಂಕ್ ಖಾತೆಗಳಿಗೆ ಬರುವ ಸಾಧ್ಯತೆಯಿದೆ. ಕೇಂದ್ರದ ಈ ಕ್ರಮದಿಂದ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.