alex Certify ಸರ್ಕಾರಿ ನೌಕರರ ʼಡಿಎʼಯಲ್ಲಿ ಶೇ.3 ರಷ್ಟು ಹೆಚ್ಚಳ: ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರ ʼಡಿಎʼಯಲ್ಲಿ ಶೇ.3 ರಷ್ಟು ಹೆಚ್ಚಳ: ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ

ಏಳನೇ ವೇತನಾ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರವು ತನ್ನೆಲ್ಲಾ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹಾಗೂ ತುಟ್ಟಿ ನಿರಾಳತೆಯಲ್ಲಿ (ಡಿಆರ್‌) 3% ಏರಿಕೆಯನ್ನು ಅನುಮೋದಿಸಿದೆ.

ಹಬ್ಬದ ಮಾಸದಲ್ಲೇ ಕೇಳಿ ಬಂದಿರುವ ಈ ಸಿಹಿ ಸುದ್ದಿಯಿಂದಾಗಿ ಕೇಂದ್ರ ಸರ್ಕಾರಿ ನೌಕರರ ಹಬ್ಬದ ಆಚರಣೆ ಇನ್ನಷ್ಟು ಭರ್ಜರಿಯಾಗಿರಲಿದೆ.

ಖಜಾನೆ ಸದಾ ತುಂಬಿರಬೇಕೆಂದ್ರೆ ಈ ʼಉಪಾಯʼ ಅನುಸರಿಸಿ……

ಕೇಂದ್ರದ ಈ ನಿರ್ಧಾರದಿಂದ 47.14 ಲಕ್ಷ ನೌಕರರಿಗೆ ಅನುಕೂಲವಾಗಲಿದ್ದು, ಜೊತೆಯಲ್ಲಿ 68.62 ಲಕ್ಷ ಪಿಂಚಣಿದಾರರು ಇದರ ಫಲ ಉಣ್ಣಲ್ಲಿದ್ದಾರೆ. ಈ ಹೊಸ ಹೆಚ್ಚಳದಿಂದಾಗಿ ಡಿಎ ಮತ್ತು ಡಿಆರ್‌ಗಳನ್ನು ಮೂಲ ವೇತನ ಹಾಗೂ ಪಿಂಚಣಿಯ 31%ರಷ್ಟರ ದರದಲ್ಲಿ ಪಾವತಿ ಮಾಡಲಾಗುವುದು.

ಕೇಂದ್ರದ ಈ ನಿರ್ಧಾರದಿಂದ ಸರ್ಕಾರೀ ಬೊಕ್ಕಸಕ್ಕೆ ವಾರ್ಷಿಕ 9,488.70 ಕೋಟಿ ರೂಗಳ ಹೊರೆ ಬೀಳಲಿದೆ.

ಖುಷಿ ಸುದ್ದಿ…! ಈ ಬ್ಯಾಂಕ್ ಗ್ರಾಹಕರ ಮನೆಗೆ ಬರಲಿದೆ 20 ಸಾವಿರ ರೂ.

ಚಾಲ್ತಿಯಲ್ಲಿರುವ 28%ನಷ್ಟು ಡಿಆರ್‌ ಮತ್ತು ಡಿಎ ದರಕ್ಕೆ 3%ರಷ್ಟನ್ನು ಸೇರಿಸಿ ಕೊಡುವ ಈ ನಿರ್ಣಯವು ಜುಲೈ 1, 2021ರಿಂದಲೇ ಅನ್ವಯವಾಗಲಿದೆ.

ಒಂದು ವೇಳೆ ಸರ್ಕಾರೀ ನೌಕರನ ಮೂಲ ವೇತನ ಮಾಸಿಕ 18,000 ರೂಪಾಯಿಗಳಿದ್ದರೆ, ತುಟ್ಟಿ ಭತ್ಯೆಯು ಈ ಹಿಂದೆ ಇದ್ದದ್ದಕ್ಕಿಂತ 540 ರೂ.ಗಳ ಏರಿಕೆ ಕಂಡು 5,500 ರೂ.ಗಳಷ್ಟಿರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...