ಬಹಳ ಕಾತರದಿಂದ ತುಟ್ಟಿ ಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿರುವ ಕೇಂದ್ರ ಸರ್ಕಾರೀ ನೌಕರರಿಗೆ 7ನೇ ವೇತನಾ ಆಯೋಗದ ಶಿಫಾರಸಿನಂತೆ ಪರಿಷ್ಕೃತ ವೇತನಗಳು ಜುಲೈ 1ರಿಂದ ಪಾವತಿಯಾಗಲಿವೆ ಎಂದು ಸರ್ಕಾರ ಅದಾಗಲೇ ಸಂಸತ್ತಿನಲ್ಲಿ ತಿಳಿಸಿದೆ.
ಇದೇ ವೇಳೆ ತುಟ್ಟಿ ಭತ್ಯೆ ಹಾಗೂ ತುಟ್ಟಿ ನಿರಾಳತೆ (ಡಿಆರ್) ಸಂಬಂಧ ಕೇಂದ್ರ ಸರ್ಕಾರೀ ನೌಕರರ ಪ್ರತಿನಿಧಿ ಸಂಸ್ಥೆ ರಾಷ್ಟ್ರೀಯ ಕೌನ್ಸಿಲ್ ಆಫ್ ಜೆಸಿಎಂ ಹಾಗೂ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಪದಾಧಿಕಾರಿಗಳು ಮತ್ತು ವಿತ್ತ ಸಚಿವಾಲಯದ ಅಧಿಕಾರಿಗಳ ಸಭೆ ಜೂನ್ 26ರಂದು ನಡೆಯಲಿದೆ.
ಜುಲೈ 1ರಿಂದ ಡಿಎ ಪಾವತಿ ಮಾಡುವುದರಿಂದ 50 ಲಕ್ಷದಷ್ಟು ಕೇಂದ್ರ ಸರ್ಕಾರದ ಸಕ್ರಿಯ ನೌಕರರು ಹಾಗೂ 65 ಲಕ್ಷದಷ್ಟು ಪಿಂಚಣಿದಾರರಿಗೆ ಅನುಕೂಲವಾಗಲಿದೆ.