ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕಾಯುತ್ತಿರುವ ಕೇಂದ್ರ ಸರ್ಕಾರದ ಲಕ್ಷಾಂತರ ನೌಕರರಿಗೆ ಜುಲೈ 1ರಿಂದ ಸಿಹಿ ಸುದ್ದಿ ಕೇಳಿಬರುವ ನಿರೀಕ್ಷೆ ಇದೆ. ತುಟ್ಟಿ ಭತ್ಯೆಗಳಾದ ಡಿಎ ಹಾಗೂ ಡಿಆರ್‌ಗಳಿಗೆ ಇದೇ ಜುಲೈ 1ರಿಂದ ಮರುಚಾಲನೆ ಕೊಡಲಾಗುವುದು ಎಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ಇದೇ ವೇಳೆ, ಅರಿಯರ್‌ಗಳ ವಿಚಾರವಾಗಿ ಕೇಂದ್ರ ಸರ್ಕಾರದ ನೌಕರರ ಪ್ರತಿನಿಧಿ ಅಂಗವಾದ ರಾಷ್ಟ್ರೀಯ ಕೌನ್ಸಿಲ್, ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಅಧಿಕಾರಿಗಳು ಹಾಗೂ ವಿತ್ತ ಸಚಿವಾಲಯಗಳ ನಡುವೆ ಇದೇ ಜೂನ್ 26ರಂದು ಸಭೆ ಇಟ್ಟುಕೊಳ್ಳಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ʼಆನ್ ಲೈನ್ʼ ವಂಚನೆಯಿಂದ ಪಾರಾಗಲು SBI ನಿಂದ ಬಹುಮುಖ್ಯ ಮಾಹಿತಿ
ಕೊರೋನಾ ವೈರಸ್ ಕಾರಣದಿಂದಾಗಿ ಡಿಎ ಹಾಗೂ ಡಿಆರ್‌ಗಳನ್ನು ಕೇಂದ್ರ ಸರ್ಕಾರ ಕಳೆದ ವರ್ಷ ತಡೆಹಿಡಿದಿತ್ತು. ಜುಲೈ 1ರಿಂದ ಈ ಭತ್ಯೆಗಳಿಗೆ ಮರುಚಾಲನೆ ಕೊಡುವ ನಿರ್ಧಾರದಿಂದ ಕೇಂದ್ರ ಸರ್ಕಾರದ 50 ಲಕ್ಷದಷ್ಟು ಉದ್ಯೋಗಿಗಳು ಹಾಗೂ 65 ಲಕ್ಷದಷ್ಟು ಪಿಂಚಣಿದಾರರಿಗೆ ನೆರವಾಗಲಿದೆ. ಆದರೆ ಭತ್ಯೆಗಳಲ್ಲಿ ಏನೇ ಹೆಚ್ಚಳವಾದರೂ ಜುಲೈ 1ರಿಂದಲೇ ಅನ್ವಯವಾಗಲಿದ್ದು, ಅದರ ಹಿಂದಿನ ಅವಧಿಗೆ ಅನ್ವಯವಾಗುವಂತೆ ಯಾವುದೇ ಪರಿಷ್ಕರಣೆಗಳನ್ನು ಕೇಂದ್ರ ಸರ್ಕಾರೀ ಉದ್ಯೋಗಿಗಳು ಪಡೆಯುವುದಿಲ್ಲ.
ದೇಶದಲ್ಲೇ ಮೊದಲಿಗೆ ರಾಜ್ಯದಲ್ಲಿ ಪರಿಹಾರ ಯೋಜನೆ: ಕೊರೋನಾಗೆ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ರೂ.
ಏಳನೇ ವೇತನ ಆಯೋಗದ ಶಿಫಾರಸಿನಂತೆ ಡಿಎ ಹಾಗೂ ಡಿಆರ್‌ಗಳ ಮೇಲಿನ ಅರಿಯರ್ ಲಾಭಗಳ ವಿಚಾರವಾಗಿ ಜೂನ್ 26ರಂದು ಈ ಸಭೆಯನ್ನು ಇಟ್ಟುಕೊಳ್ಳಲಾಗಿದೆ.