ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಸಿಹಿ ಸುದ್ದಿ ಕೊಟ್ಟಿರುವ ವಿತ್ತ ಸಚಿವಾಲಯದ ಆಯವ್ಯಯ ಇಲಾಖೆ ತುಟ್ಟಿ ಭತ್ಯೆಯೊಂದಿಗೆ ನಗದು ಪಾವತಿ ಹಾಗೂ ಗ್ರಾಚುಯಿಟಿ ನೀಡಲು ಆದೇಶ ಹೊರಡಿಸಿದೆ.
ಜನವರಿ 2020ರಿಂದ ಜೂನ್ 2021ರ ನಡುವಿನ ಅವಧಿಯ ಗ್ರಾಚುಯಿಟಿ ಮೊತ್ತವನ್ನು ಇಲಾಖೆ ಬಿಡುಗಡೆ ಮಾಡಲಿದೆ. ಈ ಅವಧಿಯಲ್ಲಿ ನಿವೃತ್ತರಾದ ಪಿಂಚಣಿದಾರರಿಗೆ ಡಿಎಗಾಗಿ ಗ್ರಾಚುಯಿಟಿಯನ್ನು ಬಿಡುಗಡೆಗೊಳಿಸುವ ಸಂಬಂಧ ವಿತ್ತ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಮೇಲ್ಕಂಡ ಅವಧಿಯಲ್ಲಿ ಸರ್ಕಾರವು ಡಿಎಯನ್ನು ಮೂರು ಬಾರಿ ಪರಿಷ್ಕರಿಸಿದೆ. ಪಿಂಚಣಿದಾರರಿಗೆ ಒದಗಿಸುವ ಡಿಎ ಸಹ ಕಾಲಕಾಲಕ್ಕೆ ಬದಲಾಗುತ್ತದೆ.
ಉದಾಹರಣೆಗೆ ಜನವರಿ 1, 2020ರಿಂದ ಜೂನ್ 31, 2020ರ ನಡುವೆ ನಿವೃತ್ತರಾಗುವ ಉದ್ಯೋಗಿಗಳಿಗೆ 21% ದರದಲ್ಲಿ ಡಿಎ ನೀಡಲಾಗುವುದು.
1 ಜುಲೈ 2020, 31 ಡಿಸೆಂಬರ್ 2020ರ ನಡುವೆ ನಿವೃತ್ತರಾಗುವ ಉದ್ಯೋಗಿಗಳಿಗೆ 24% ದರದಲ್ಲಿ ಹಾಗೂ ಜನವರಿ 1, 2021ರಿಂದ ಜನವರಿ 30, 2021ರಲ್ಲಿ ನಿವೃತ್ತರಾಗುವ ಪಿಂಚಣಿದಾರರಿಗೆ 28% ದರದಲ್ಲಿ ಡಿಎ ಸಿಗಲಿದೆ.