ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ವೇತನದ ಹೊರತಾಗಿ ಇನ್ನು 30,000 ರೂಪಾಯಿ ಸಿಗಲಿದೆ. ಆದರೆ, ಇದಕ್ಕೆ ಕೆಲವು ಷರತ್ತುಗಳು ಅನ್ವಯ. ಈ ಹೆಚ್ಚುವರಿ ಹಣ ಪ್ರೋತ್ಸಾಹ ಧನವಾಗಿದ್ದು, ಹೊಸ ಉನ್ನತ ವ್ಯಾಸಂಗಕ್ಕೆ ನೀಡುವಂಥದ್ದಾಗಿದೆ.
ಪಿ ಎಚ್ ಡಿ ಯಂತಹ ಉನ್ನತ ಪದವಿ ಪಡೆದ ಉದ್ಯೋಗಿಗಳಿಗೆ ಪ್ರೋತ್ಸಾಹ ಧನ 30,000 ರೂ. ಸಿಗಲಿದೆ. ಸೇವೆಗೆ ಬಂದ ನಂತರ ಹೊಸದಾಗಿ ಉನ್ನತ ವಿದ್ಯಾರ್ಹತೆಗಳನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ಒಂದೇ ಕಂತಿನಲ್ಲಿ ಈ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
ಸೇವೆಗೆ ಬಂದ ನಂತರ ಹೊಸದಾಗಿ ಉನ್ನತ ವಿದ್ಯಾರ್ಹತೆಗಳನ್ನು ಪಡೆಯುವ ಕೇಂದ್ರ ಸರ್ಕಾರಿ ನೌಕರರಿಗೆ 7 ನೇ ವೇತನದ ನಂತರ 2019 ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಜ್ಞಾಪಕ ಪತ್ರದಲ್ಲಿ ಹೇಳಿರುವ ಪ್ರಕಾರ, ರೂ. 2000 ರಿಂದ ರೂ 10,000 ವರೆಗಿನ ಒಂದೇ ಕಂತಿನ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಇದು 2019ರಿಂದ ಚಾಲ್ತಿಯಲ್ಲಿದೆ.
2019 ರಲ್ಲಿ ಸರ್ಕಾರವು ಅಸ್ತಿತ್ವದಲ್ಲಿರುವ ಎಲ್ಲ ಆದೇಶ / ಕಚೇರಿ ಮೆಮೊ/ ಸೂಚನೆ/ ಮಾರ್ಗಸೂಚಿಗಳನ್ನು ರದ್ದುಗೊಳಿಸಿ, ಹೊಸ ಉನ್ನತ ವಿದ್ಯಾರ್ಹತೆಗಳನ್ನು ಪಡೆಯಲು ಪ್ರೋತ್ಸಾಹವನ್ನು ನೀಡುವ ನಿರ್ಧಾರ ಘೋಷಿಸಿತು. ಇದರಂತೆ, ಸರ್ಕಾರಿ ನೌಕರನಿಗೆ ಉದ್ಯೋಗಕ್ಕೆ ನೇರವಾಗಿ ಸಂಬಂಧಿಸಿದ ಕ್ಷೇತ್ರಗಳ ಕೋರ್ಸ್‌ಗೆ ಅನುಮತಿ ಮತ್ತು ಪ್ರೋತ್ಸಾಹ ಧನ ಸಿಗುತ್ತದೆ.
ಪಿ.ಎಚ್.ಡಿ. ಅಥವಾ ಸಮಾನ 30,000 ರೂ ರೂಪಾಯಿ, ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಪಿಜಿ ಪದವಿ/ಡಿಪ್ಲೊಮಾ ಅಥವಾ ತತ್ಸಮಾನ. 25,000 ರೂ., ಒಂದು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪಿಜಿ ಪದವಿ/ಡಿಪ್ಲೊಮಾ ಅಥವಾ ತತ್ಸಮಾನ. 20,000 ರೂ., ಮೂರು ವರ್ಷಗಳಿಗಿಂತ ಹೆಚ್ಚಿನ ಅವಧಿಯ ಪದವಿ/ಡಿಪ್ಲೊಮಾ, ಅಥವಾ ತತ್ಸಮಾನ. 15,000 ರೂ., ಮೂರು ವರ್ಷ ಅಥವಾ ಅದಕ್ಕಿಂತ ಕಡಿಮೆ ಅವಧಿಯ ಪದವಿ/ಡಿಪ್ಲೊಮಾ ಅಥವಾ ತತ್ಸಮಾನ. 10,000 ರೂ. ಪ್ರೋತ್ಸಾಹ ಧನವಿದೆ.
ಹಾಗಿದ್ದರೂ ಹುದ್ದೆಗೆ ನೇಮಕಾತಿ ನಿಯಮಗಳಲ್ಲಿ ಅತ್ಯಗತ್ಯ ಅಥವಾ ಅಪೇಕ್ಷಣೀಯ ವಿದ್ಯಾರ್ಹತೆಗಳಾಗಿ ನಿಗದಿಪಡಿಸಿದ ವಿದ್ಯಾರ್ಹತೆಗಳಿಗೆ ಪ್ರೋತ್ಸಾಹವು ಲಭ್ಯವಿರುವುದಿಲ್ಲ ಎಂದು ಕಚೇರಿ ಮೆಮೋ ಹೇಳಿದೆ. ಇದು ಉದ್ಯೋಗಿಯ ವೃತ್ತಿಜೀವನದಲ್ಲಿ ಗರಿಷ್ಠ 2 ಬಾರಿಗೆ ಸೀಮಿತ ಮತ್ತು ಸತತ ಪ್ರೋತ್ಸಾಹ ಧನಗಳ ನಡುವೆ ಕನಿಷ್ಠ 2 ವರ್ಷದ ಅಂತರವೂ ಕಡ್ಡಾಯ.