ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಖುಷಿ ಸುದ್ದಿ ಸಿಕ್ಕಿದೆ. ಡಿಎ ಹಾಗೂ ಡಿಆರ್ ಬಿಡುಗಡೆಯಾದ ನಂತ್ರ ಈಗ ಮತ್ತೊಂದು ಸಿಹಿ ಸುದ್ದಿಯನ್ನು ಕೇಂದ್ರ ನೀಡಿದೆ. ಕೊರೊನಾದಿಂದಾಗಿ ಮಕ್ಕಳ ಶಿಕ್ಷಣ ಭತ್ಯೆ ಪಡೆಯಲು ಸಾಧ್ಯವಾಗದ ಉದ್ಯೋಗಿಗಳು ಈಗ ಅದನ್ನು ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ಅಧಿಕೃತ ದಾಖಲೆ ಅಗತ್ಯವಿರುವುದಿಲ್ಲ.
ಕೇಂದ್ರ ಉದ್ಯೋಗಿಗಳು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಭತ್ಯೆಯನ್ನು ಪಡೆಯುತ್ತಾರೆ. ಇದು 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ತಿಂಗಳಿಗೆ 2,250 ರೂಪಾಯಿಯಾಗಿರುತ್ತದೆ. ಆದರೆ ಕಳೆದ ವರ್ಷದಿಂದ ಕೊರೊನಾ ಕಾರಣಕ್ಕೆ ಶಾಲೆಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದಾಗಿ ಕೇಂದ್ರ ಉದ್ಯೋಗಿಗಳು ಸಿಇಎ ಪಡೆಯಲು ಸಾಧ್ಯವಾಗಿಲ್ಲ.
ಕಳೆದ ತಿಂಗಳು, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಒಎಂ ಬಿಡುಗಡೆ ಮಾಡಿತ್ತು. ಇದರಲ್ಲಿ ಕೊರೊನಾದಿಂದಾಗಿ, ಕೇಂದ್ರ ಸರ್ಕಾರಿ ನೌಕರರಿಗೆ ಮಕ್ಕಳ ಶಿಕ್ಷಣದ ಭತ್ಯೆ ಸಿಗ್ತಿಲ್ಲವೆಂದು ಹೇಳಲಾಗಿತ್ತು. ಆನ್‌ಲೈನ್‌ನಲ್ಲಿ ಶುಲ್ಕವನ್ನು ಜಮಾ ಮಾಡಿದ ನಂತರವೂ ಶಾಲೆಯಿಂದ ಯಾವುದೇ ದಾಖಲೆ ಸಿಗದ ಕಾರಣ ಕ್ಲೇಮ್ ಮಾಡುವುದು ಕಷ್ಟವಾಗಿತ್ತು. ಈಗ ಸಿಬ್ಬಂದಿ, ಸಿಇಎ ಕ್ಲೈಮ್ ಅನ್ನು ಸ್ವಯಂ ಘೋಷಣೆಯ ಮೂಲಕ ಕ್ಲೈಮ್ ಮಾಡಬಹುದು. ಇಲ್ಲವೆ ಫಲಿತಾಂಶ, ರಿಪೋರ್ಟ್ ಕಾರ್ಡ್, ಶುಲ್ಕ ಪಾವತಿಯ ಇ-ಮೇಲನ್ನು ಮುದ್ರಿಸಿ ನೀಡಬಹುದು ಎಂದಿದೆ. ಈ ಸೌಲಭ್ಯವು ಮಾರ್ಚ್ 2020 ಮತ್ತು ಮಾರ್ಚ್ 2021 ರಲ್ಲಿ ಕೊನೆಗೊಳ್ಳುವ ಶೈಕ್ಷಣಿಕ ವರ್ಷಕ್ಕೆ ಮಾತ್ರ ಲಭ್ಯವಿರುತ್ತದೆ.
ಇಬ್ಬರು ಮಕ್ಕಳ ಶಿಕ್ಷಣಕ್ಕಾಗಿ, ಕೇಂದ್ರ ಉದ್ಯೋಗಿಗಳು ಮಕ್ಕಳ ಶಿಕ್ಷಣ ಭತ್ಯೆಯನ್ನು ಪಡೆಯುತ್ತಾರೆ. ಪ್ರತಿ ಮಗುವಿಗೆ ಈ ಭತ್ಯೆ ತಿಂಗಳಿಗೆ 2250 ರೂಪಾಯಿ. ಇದರರ್ಥ ಉದ್ಯೋಗಿಗಳು ಇಬ್ಬರು ಮಕ್ಕಳಿಗೆ ತಿಂಗಳಿಗೆ 4500 ರೂಪಾಯಿ ಪಡೆಯುತ್ತಾರೆ. ಈವರೆಗೂ ಶಿಕ್ಷಣ ಭತ್ಯೆ ಕ್ಲೈಮ್ ಮಾಡದವರು ಈ ತಿಂಗಳು ಮಾಡಬಹುದು. ಇಬ್ಬರು ಮಕ್ಕಳನ್ನು ಹೊಂದಿದ್ದರೆ ಅವರಿಗೆ 4500 ರೂಪಾಯಿ ಸಿಗಲಿದೆ.
ಮಕ್ಕಳ ಶಿಕ್ಷಣ ಭತ್ಯೆಯನ್ನು ಪಡೆಯಲು, ಕೇಂದ್ರೀಯ ಉದ್ಯೋಗಿಗಳು, ಶಾಲಾ ಪ್ರಮಾಣಪತ್ರ, ದಾಖಲೆಗಳನ್ನು ಸಲ್ಲಿಸಬೇಕು. ಮಗು ನಮ್ಮ ಶಾಲೆಯಲ್ಲಿ ಓದುತ್ತಿದೆ ಎಂದು ಶಾಲೆಗಳು ನೀಡುವ ಅಧಿಕೃತ ಘೋಷಣೆ ಪ್ರತಿ ಬೇಕಾಗುತ್ತದೆ.