ಕೇಂದ್ರ ಸರ್ಕಾರಿ ನೌಕರರಿಗೆ, ಕೇಂದ್ರ ಸರ್ಕಾರ ಮತ್ತೆ ಖುಷಿ ಸುದ್ದಿ ನೀಡಲು ಮುಂದಾಗಿದೆ. ಕೇಂದ್ರ ಉದ್ಯೋಗಿಗಳು ಮತ್ತು ಪಿಂಚಣಿದಾರರು ಸೆಪ್ಟೆಂಬರ್‌ನಿಂದ ಶೇಕಡಾ 28 ರಷ್ಟು ಡಿಎ ಪಡೆಯಲು ಆರಂಭಿಸಿದ್ದಾರೆ. ಶೀಘ್ರದಲ್ಲೇ ಸರ್ಕಾರ ಇದಕ್ಕೆ ಜೂನ್ ಡಿಎ ಹೆಚ್ಚಳ ಸೇರಿಸಲು ನಿರ್ಧರಿಸಿದೆ ಎನ್ನಲಾಗ್ತಿದೆ. ಒಂದು ವೇಳೆ ಸರ್ಕಾರ ಹೀಗೆ ಮಾಡಿದಲ್ಲಿ, ಕೇಂದ್ರ ಸರ್ಕಾರಿ ನೌಕರರ ಡಿಎ, ಶೇಕಡಾ 28ರ ಬದಲು ಶೇಕಡಾ 31ರಷ್ಟಾಗಲಿದೆ.
ಜೂನ್ 2021ರ ಡಿಎಯನ್ನು ಕೇಂದ್ರ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಜನವರಿಯಿಂದ ಮೇವರೆಗೆ ಭತ್ಯೆ ಹೆಚ್ಚಳವಾಗಿದೆ. ಸೆಪ್ಟೆಂಬರ್ ನಿಂದ ಹೆಚ್ಚಳವಾದ ಡಿಎ, ಕೇಂದ್ರ ಸರ್ಕಾರಿ ನೌಕರರಿಗೆ ಸಿಗ್ತಿದೆ. ಜೂನ್ ಡಿಎಯನ್ನು ಸರ್ಕಾರ ಶೇಕಡಾ 3ರಷ್ಟು ಹೆಚ್ಚಿಸಲಿದೆ ಎನ್ನಲಾಗ್ತಿದೆ. ಒಂದು ವೇಳೆ ಶೇಕಡಾ 3ರಷ್ಟು ಹೆಚ್ಚಾದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ಡಿಎ ಶೇಕಡಾ 31ರಷ್ಟಾಗಲಿದೆ.
ಹಬ್ಬದ ಋತುವಿನಲ್ಲಿ ದೇಹ ತೂಕ ಹೆಚ್ಚದಂತೆ ನೋಡಿಕೊಳ್ಳಲು ಇಲ್ಲಿದೆ ಟಿಪ್ಸ್
ಜನವರಿ 2020 ರಲ್ಲಿ ಡಿಎಯನ್ನು ಶೇಕಡಾ 4ರಷ್ಟು ಹೆಚ್ಚಿಸಲಾಗಿತ್ತು. ಜೂನ್ 2020ರಲ್ಲಿ ಶೇಕಡಾ 3 ರಷ್ಟು ಏರಿಕೆ ಮಾಡಲಾಗಿತ್ತು. ಜನವರಿ 2021 ರಲ್ಲಿ ಶೇಕಡಾ 4 ರಷ್ಟು ಹೆಚ್ಚಾಗಿತ್ತು. ಈ ಮೂರು ಏರಿಕೆ ನಂತ್ರ ಡಿಎ ಶೇಕಡಾ 11ರಷ್ಟು ಹೆಚ್ಚಾಗಿತ್ತು.
ಕೇಂದ್ರ ನೌಕರರು ಮತ್ತು ಪಿಂಚಣಿದಾರರು, ಮೂಲ ವೇತನ ಮತ್ತು ಹುದ್ದೆಗನುಗುಣವಾಗಿ ವೇತನ ಹೆಚ್ಚಳದ ಲಾಭ ಪಡೆಯಲಿದ್ದಾರೆ.