ಅದಾಗಲೇ ಘೋಷಿಸಿರುವ ತುಟ್ಟಿ ಭತ್ಯೆ ಹೆಚ್ಚಳದೊಂದಿಗೆ ಕೇಂದ್ರ ಸರ್ಕಾರದ ಆಯ್ದ ನೌಕರರು ದೀಪಾವಳಿಗೆ ಬಂಪರ್ ಬೋನಸ್ ಪಡೆಯಲಿದ್ದಾರೆ. ಭಾರತೀಯ ರೈಲ್ವೇ ತನ್ನ ನೌಕರರಿಗೆ ಭರ್ಜರಿ ಬೋನಸ್ ನೀಡಲು ನಿರ್ಧರಿಸಿದೆ.
ರೈಲ್ವೇ ನೌಕರರಿಗೆ ಹಬ್ಬದ ಬೋನಸ್ ಎಂದು 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡುವುದಾಗಿ ಕೆಲ ದಿನಗಳ ಹಿಂದೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಘೋಷಿಸಿದ್ದರು.
BIG NEWS: ಶತಕೋಟಿ ಡಾಲರ್ ಸಂಪತ್ತು ಹೊಂದಿದ ಕುಬೇರರ ಸಾಲಿಗೆ ಸೇರಿದ ಅಂಬಾನಿ ಈಗ ವಿಶ್ವದ 11 ನೇ ಶ್ರೀಮಂತ
ದಸರಾಗೂ ಮುನ್ನ ರೈಲ್ವೇಯ 11.56 ಲಕ್ಷಕ್ಕೂ ಹೆಚ್ಚಿನ ಗೆಜ಼ೆಟೇತರ ನೌಕರರ ಖಾತೆಗಳಿಗೆ ಘೋಷಿಸಲ್ಪಟ್ಟ ಬೋನಸ್ ಜಮೆಯಾಗಲಿದೆ. ಸಾಮಾನ್ಯದವಾಗಿ 72 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ನೀಡಲಾಗುತ್ತದೆ. ಆದರೆ ಈ ಬಾರಿ 78 ದಿನಗಳ ವೇತನವನ್ನು ಬೋನಸ್ ರೂಪದಲ್ಲಿ ಕೊಡುತ್ತಿರುವುದರಿಂದ 1,985 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಕೇಂದ್ರದ ಮೇಲೆ ಬೀಳಲಿದೆ.
ಭಾರತೀಯ ರೈಲ್ವೇ ಜೊತೆಗೆ ಕೋಲ್ ಇಂಡಿಯಾ ಸಹ ತನ್ನ ನೌಕರರಿಗೆ ಪ್ರದರ್ಶನಾಧರಿತ ಬೋನಸ್ ಘೋಷಿಸಿದೆ. ಎಕ್ಸಿಕ್ಯೂಟಿವ್‌ಯೇತರ ನೌಕರರಿಗೆ 72,500 ರೂ.ಗಳವರೆಗೂ ಈ ಬೋನಸ್ ಇರಲಿದೆ. ಅಕ್ಟೋಬರ್ 11, 2021ಕ್ಕೂ ಮುನ್ನ ಕೋಲ್ ಇಂಡಿಯಾ ತನ್ನ ನೌಕರರ ಖಾತೆಗಳಿಗೆ ಬೋನಸ್ ದುಡ್ಡನ್ನು ಹಾಕಲಿದೆ.
ಇದೇ ವೇಳೆ ಭಾರತ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ ಕೊಡುವ ತುಟ್ಟಿ ಭತ್ಯೆಯನ್ನು 3%ರಷ್ಟು ಹೆಚ್ಚಳ ಮಾಡಿ, ಮೂಲ ವೇತನದ 28%ರಷ್ಟು ಇದ್ದ ಡಿಎ ಅನ್ನು 31%ಗೆ ಹೆಚ್ಚಿಸಿದೆ. ಈ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರೊಂದಿಗೆ ಪಿಂಚಣಿದಾರರಿಗೂ ಅನುಕೂಲವಾಗಲಿದೆ.