ಹಬ್ಬದ ಮಾಸ ಹತ್ತಿರವಾಗುತ್ತಿದ್ದಂತೆಯೇ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿಯೊಂದು ಬಂದಿದೆ. ತನ್ನ ನೌಕರರಿಗೆ ತುಟ್ಟಿ ಭತ್ಯೆ (ಡಿಎ ಮತ್ತು ಡಿಆರ್) ಏರಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ನೀಡುತ್ತದ್ದ ಡಿಎಯನ್ನು ಶೇ.17 ನಿಂದ ಶೇ.28 ರಷ್ಟಿದ್ದ ಹಳೆಯ ಮಟ್ಟಕ್ಕೆ ತಂದು ನಿಲ್ಲಿಸಲು ಸರ್ಕಾರ ಇತ್ತೀಚೆಗೆ ತಾನೇ ನಿರ್ಧರಿಸಿತ್ತು.
ಈ ಏರಿಕೆಯು ಜುಲೈ 2021ರಿಂದ ಅನ್ವಯವಾಗಲಿದೆ. ಇದೀಗ ಡಿಎಯನ್ನು ಮೂಲ ವೇತನದ ಇನ್ನೂ ಶೇ.3ರಷ್ಟು ಏರಿಸಲು ಕೇಂದ್ರ ಸರ್ಕಾರ ಮುಂದಾಗುವ ಸಾಧ್ಯತೆ ಇದೆ.
ಅಕ್ಟೋಬರ್ 1ರಿಂದ ಚಾಲ್ತಿಯಲ್ಲಿರುವುದಿಲ್ಲ ಈ ಎರಡು ಬ್ಯಾಂಕ್ ನ ಹಳೆ ‘ಚೆಕ್ ಬುಕ್’
ಇದೇ ವೇಳೆ, ಮನೆ ಬಾಡಿಗೆ ಭತ್ಯೆಯಲ್ಲೂ ಸಹ ಶೇ.24 ನಿಂದ ಶೇ.27 ಕ್ಕೆ ಏರಿಕೆ ಯಾಗುತ್ತಿದ್ದು ಒಟ್ಟಾರೆ ಕೇಂದ್ರದ ನೌಕರರಿಗೆ ಒಂದಷ್ಟು ಸಮಾಧಾನ ತರುವ ಸಂಗತಿಯಾಗಿದೆ.
2021ರ ಮೊದಲಾರ್ಧಕ್ಕೆ ಅನ್ವಯವಾಗಲಿರುವ ಡಿಎ ಏರಿಕೆಯನ್ನು ಸೆಪ್ಟೆಂಬರ್‌ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಆದರೆ ಡಿಎಯನ್ನು ಹೆಚ್ಚಳ ಮಾಡಲು ಸರ್ಕಾರ ಯಾವಾಗ ಮುಂದಾಗಲಿದೆ ಎಂಬುದಕ್ಕೆ ಹೆಚ್ಚಿನ ಮಾಹಿತಿಗಳು ಇಲ್ಲ.
ಸೆಪ್ಟೆಂಬರ್‌ನಲ್ಲಿ ಡಿಎ ಏರಿಕೆ ಘೋಷಣೆಯಾದರೆ ಅದು ಅಕ್ಟೋಬರ್ ಸಂಬಳದೊಂದಿಗೆ ಪ್ರಭಾವಕ್ಕೆ ಬರಲಿದೆ ಎನ್ನಲಾಗುತ್ತಿದೆ.
ಒಂದು ವೇಳೆ ನೌಕರನ ಮೂಲ ವೇತನ 20,000 ರೂಪಾಯಿ ಇದ್ದಲ್ಲಿ, ಶೇ.31ರಷ್ಟು ಡಿಎ ರೂಪದಲ್ಲಿ 6,200 ರೂಪಾಯಿಗಳ ಹೆಚ್ಚಿನ ಪೇಮೆಂಟ್ ಆತನ ಖಾತೆಗೆ ಜಮಾ ಆಗಲಿದೆ.