ಕೇಂದ್ರ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ಡಿಎ ಹಾಗೂ ಡಿಆರ್ ಹೆಚ್ಚಳಕ್ಕೆ ಕಾಯ್ತಿದ್ದ 1.2 ಕೋಟಿಗೂ ಹೆಚ್ಚು ನೌಕರರಿಗೆ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂತೋಷದ ಸುದ್ದಿ ಸಿಕ್ಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಬಾಕಿ ಇರುವ ಪ್ರಿಯ ಭತ್ಯೆಯನ್ನು ಮತ್ತೆ ನೀಡಲು ಒಪ್ಪಿಗೆ ನೀಡಲಾಗಿದೆ. ಕೇಂದ್ರ ಉದ್ಯೋಗಿಗಳಿಗೆ ಈಗ ಶೇಕಡಾ 28ರ ದರದಲ್ಲಿ ಪ್ರಿಯ ಭತ್ಯೆ ಸಿಗಲಿದೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇಕಡಾ 17ರ ದರದಲ್ಲಿ ಪ್ರಿಯ ಭತ್ಯೆ ಸಿಗ್ತಿತ್ತು. ಅಂದ್ರೆ ಶೇಕಡಾ 11ರಷ್ಟು ಡಿಎ ಹೆಚ್ಚಳವಾಗಿದೆ.
ಕೊರೊನಾ ಸೋಂಕಿನಿಂದಾಗಿ ಕೇಂದ್ರ ಸರ್ಕಾರ ಹಿಂದಿನ ವರ್ಷ ನೌಕರರಿಗೆ ಪ್ರಿಯ ಭತ್ಯೆಯನ್ನು ನೀಡಿರಲಿಲ್ಲ. ಜನವರಿ 2020, ಜುಲೈ2020, ಜನವರಿ 2021 ಹಾಗೂ ಜುಲೈ 2021ರ ಪ್ರಿಯ ಭತ್ಯೆಯನ್ನು ಸರ್ಕಾರ, ನೌಕರರಿಗೆ ನೀಡಿಲ್ಲ. ಕೇಂದ್ರ ಸರ್ಕಾರ ಜನವರಿ 2020ರಲ್ಲಿ ಪ್ರಿಯ ಭತ್ಯೆಯನ್ನು ಶೇಕಡಾ 4ರಷ್ಟು ಹೆಚ್ಚಿಸಿತ್ತು.