ಆತ್ಮೀಯ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿರುವ ಕೇಂದ್ರ ನೌಕರರು ಇದಕ್ಕಾಗಿ ಸೆಪ್ಟೆಂಬರ್ ವರೆಗೆ ಕಾಯಬೇಕು. ಆದ್ರೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಕೇಂದ್ರ ಸರ್ಕಾರಿ ನೌಕರರಿಗೆ ನೆಮ್ಮದಿ ಸುದ್ದಿಯನ್ನು ನೀಡಿದೆ.
ಮಕ್ಕಳ ಶಿಕ್ಷಣ ಭತ್ಯೆ ಹಕ್ಕು ಪಡೆಯುವ ನಿಯಮಗಳನ್ನು ಸಡಿಲಿಸಲಾಗಿದೆ. ಉದ್ಯೋಗಿಗಳು ಸ್ವಯಂ ಪ್ರಮಾಣೀಕರಣ ಮತ್ತು ನಿಗದಿತ ರೀತಿಯಲ್ಲಿ ಮಕ್ಕಳ ಫಲಿತಾಂಶ, ವರದಿ ಕಾರ್ಡ್, ಇ-ಮೇಲ್, ಶುಲ್ಕ ಪಾವತಿಯ ಎಸ್‌ಎಂಎಸ್ ಇದ್ರಲ್ಲಿ ಒಂದರ ಮುದ್ರಣ ನೀಡಿ ಕ್ಲೇಮ್ ಮಾಡಬಹುದು.
2020-21ರ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ ಲಾಕ್‌ಡೌನ್ ನಿಂದಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಈ ನಿರ್ಧಾರ ತೆಗೆದುಕೊಂಡಿದೆ. 7 ನೇ ವೇತನ ಆಯೋಗದ ಶಿಫಾರಸ್ಸಿನ ಪ್ರಕಾರ ಕೇಂದ್ರ ಸರ್ಕಾರಿ ನೌಕರರು ಸಿಇಎ ಅಡಿಯಲ್ಲಿ ಮಾಸಿಕ 2250 ರೂಪಾಯಿ ಪಡೆಯುತ್ತಾರೆ. ಆದರೆ ಕೊರೊನಾದಿಂದಾಗಿ ಸಿಇಎ ಹಕ್ಕು ಪಡೆಯಲು ತೊಂದರೆಯಾಗ್ತಿದೆ. ಹಾಗಾಗಿ ಮಕ್ಕಳ ಫಲಿತಾಂಶ, ವರದಿ ಕಾರ್ಡ್‌ಗಳನ್ನು ಶಾಲೆಗಳು ಎಸ್‌ಎಂಎಸ್, ಇಮೇಲ್ ಮೂಲಕ ಕಳುಹಿಸಿಲ್ಲ. ನೌಕರರ ಈ ಸಮಸ್ಯೆಯನ್ನು ಹೋಗಲಾಡಿಸಲು, ಡಿಒಪಿಟಿ ಈ ನಿಯಮಗಳನ್ನು ರೂಪಿಸಿದೆ.