77 ವರ್ಷದ ಈ ಅಜ್ಜನಿಗೆ 17 ಮಂದಿ ಪತ್ನಿಯರು, 96 ಮಂದಿ ಮಕ್ಕಳು. ಶಾಕ್ ಆದ್ರಾ..? ಹೌದು. ಈ ಮೂಲಕ ದಾಖಲೆ ನಿರ್ಮಿಸಿದ ‘ಸೂಪರ್ ಡ್ಯಾಡಿ’ಇದೀಗ ಸೆಂಚುರಿ ಹೊಡೆಯಲು 18 ನೇ ಮದುವೆಯಾಗಲು ರೆಡಿಯಾಗಿದ್ದಾರೆ.
ಮೊಹಮ್ಮದ್ ಮುರಾದ್ ಅಬ್ದುಲ್ ರೆಹಮಾನ್ ಎಂಬುವವರು ಈ ದಾಖಲೆ ಮಾಡಿದ್ದಾರೆ.ಇವರು ದುಬೈ ನಿವಾಸಿಯಾಗಿದ್ದು, ಜನರು ಈಗ ಅವರನ್ನು ಸೂಪರ್ ಡ್ಯಾಡಿ ಎಂದು ಕರೆಯುತ್ತಾರೆ. ಯಾಕೆಂದರೆ ರಹಮಾನ್ ಅವರು ವಿಶಿಷ್ಟ ದಾಖಲೆಯನ್ನು ನಿರ್ಮಿಸಿದ್ದಾರೆ.
ಅವರ ಪ್ರಸ್ತುತ ವಯಸ್ಸು 77 ವರ್ಷ ಅವರು 96 ಮಕ್ಕಳನ್ನು ಹೊಂದುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಲು ಹೊರಟಿದ್ದಾರೆ. ಅವರು ಇನ್ನೂ, ಕೇವಲ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರೆ, ಅವರು 100 ಮಕ್ಕಳನ್ನು ಪಡೆದಂತಾಗುತ್ತದೆ.
ಮೊಹಮ್ಮದ್ ಮುರಾದ್ ಅಬ್ದುಲ್ ರೆಹಮಾನ್ ತನ್ನ 170 ಪುತ್ರರು ಮತ್ತು ಮೊಮ್ಮಕ್ಕಳೊಂದಿಗೆ ನಗರದ 17 ವಿವಿಧ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಅವರ ಅನೇಕ ಪುತ್ರರು ಸರ್ಕಾರಿ ಕಚೇರಿಗಳಲ್ಲಿ ಹಿರಿಯ ಅಧಿಕಾರಿಗಳಾಗಿದ್ದಾರೆ ಮತ್ತು ಪೊಲೀಸ್ ಇಲಾಖೆಯಲ್ಲಿಯೂ ನೇಮಕಗೊಂಡಿದ್ದಾರೆ. ತಂದೆಯ ಹಿರಿಯ ಮಗನಿಗೆ ಈಗ 56 ವರ್ಷ ಮತ್ತು ಅವರ ಕಿರಿಯ ಮಗಳಿಗೆ ಸುಮಾರು 8 ವರ್ಷ ಎಂದು ಹೇಳಲಾಗಿದೆ.
ಆದರೆ ಅವರು ದಾಖಲೆ ಮಾಡಲು ಯೋಚಿಸುವ ಹೊತ್ತಿಗೆ, ಅವರ ಇಬ್ಬರು ಮಕ್ಕಳು ಸಹ ಸಾವನ್ನಪ್ಪಿದ್ದರು. ಒಬ್ಬ ಮಗ ಇಸ್ಮಾಯಿಲ್ 2002 ರಲ್ಲಿ ತನ್ನ 18 ನೇ ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ, ಇನ್ನೊಬ್ಬ ಮಗ 2016 ರಲ್ಲಿ ಅಜ್ಮಾನ್ ಶೇಖ್ ಖಲೀಫಾ ಸಾವನ್ನಪ್ಪಿದನು.ಕುತೂಹಲಕಾರಿ ಸಂಗತಿಯೆಂದರೆ, 110 ವರ್ಷಗಳ ಕಾಲ ಬದುಕಿದ್ದ ಅವರ ತಂದೆ ಮುರಾದ್ ಅಬ್ದುಲ್ ರೆಹಮಾನ್ ಕೂಡ ನಾಲ್ಕು ವಿವಾಹಗಳನ್ನು ಹೊಂದಿದ್ದರು. ಮೊಹಮ್ಮದ್ ಮುರಾದ್ ಅಬ್ದುಲ್ ರಹಮಾನ್ ಸೇರಿದಂತೆ ಅವರ ನಾಲ್ವರು ಪತ್ನಿಯರಿಂದ ಒಟ್ಟು 27 ಮಕ್ಕಳು ಜನಿಸಿದ್ದರಂತೆ.
100 ಗುರಿಯನ್ನು ತಲುಪಿದ ನಂತರ ಮದುವೆಯಾಗುವುದನ್ನು ಮತ್ತು ಮಕ್ಕಳನ್ನು ಹೊಂದುವುದನ್ನು ನಿಲ್ಲಿಸುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ ಎನ್ನಲಾಗಿದೆ. ‘ನನ್ನ ದಾಖಲೆಯನ್ನು ಪೂರೈಸಲು ನಾನು ಮತ್ತೆ ಮದುವೆಯಾಗಬಹುದು’ ಎಂದು ಅವರು ತಮ್ಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.