
ಮೈಸೂರು: ಹ್ಯಾಟ್ರಿಕ್ ಹೀರೋ ನಟ ಶಿವರಾಜ್ ಕುಮಾರ್ ಶಕ್ತಿಧಾಮದ ಮಕ್ಕಳೊಂದಿಗೆ 77ನೇ ಸ್ವಾತಂತ್ರ್ಯ ದಿನಾಚರನೆ ಆಚರಿಸಿದ್ದಾರೆ.
ಡಾ.ರಾಜ್ ಕುಮಾರ್ ಆರಂಭಿಸಿದ್ದ ಮೈಸೂರಿನ ಶಕ್ತಿಧಾಮದ ಉಸ್ತುವಾರಿ ಜವಾಬ್ದಾರಿ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮೇಲಿದ್ದು, ಆಗಾಗ ಅಲ್ಲಿಗೆ ಭೇಟಿ ನೀಡುವ ಶಿವರಾಜ್ ಕುಮಾರ್ ಅಲ್ಲಿನ ಮಕ್ಕಳ ಜೊತೆ ಕಾಲ ಕಳೆಯುತ್ತಾರೆ.
ಇಂದು 77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಶಕ್ತಿಧಾಮಕ್ಕೆ ಭೇಟಿ ನೀಡಿದ ಶಿವರಾಜ್ ಕುಮಾರ್, ಅಲ್ಲಿನ ಮಕ್ಕಳ ಜೊತೆ ಧ್ವಜಾರೋಹಣ ನೆರವೇರಿಸಿ ಸಂಭ್ರಮಿಸಿದರು. ಧ್ವಜಾರೋಹಣದ ಬಳಿಕ ಸಿಹಿ ಹಂಚಲಾಯಿತು.