alex Certify ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಕೊಚ್ಚಿ ಕೊಂದ 76 ವರ್ಷದ ವೃದ್ಧ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಕೊಚ್ಚಿ ಕೊಂದ 76 ವರ್ಷದ ವೃದ್ಧ..!

ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನ ಬರ್ಬರವಾಗಿ ಕೊಲೆಗೈದ ಆರೋಪದ ಅಡಿಯಲ್ಲಿ 76 ವರ್ಷದ ವೃದ್ಧನನ್ನ ಈಶಾನ್ಯ ದೆಹಲಿ ಪೊಲೀಸರು ಹೊಸ ಉಸ್ಮಾನ್​ಪುರ ಏರಿಯಾದಲ್ಲಿ ಬಂಧಿಸಿದ್ದಾರೆ.

ಮಂಗಳವಾರ ಬೆಳಗ್ಗೆ ದಂಪತಿ ನಡುವೆ ಜಗಳ ಆರಂಭವಾಗಿತ್ತು. ಜಗಳದಿಂದ ಕೋಪಗೊಂಡ ಹಜೀಮ್​ ಅಬ್ದುಲ್​ ಹಕೀಮ್​ ಅಡುಗೆ ಮನೆಯಲ್ಲಿದ್ದ ಚಾಕುವನ್ನ ತೆಗೆದುಕೊಂಡು ಪತ್ನಿಯ ಕುತ್ತಿಗೆಯನ್ನ ಇರಿದಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿ ಮಾಹಿತಿ ನೀಡಿದ್ರು.

ವೃದ್ಧ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದರೆ ಅತ್ತೆಯನ್ನ ತಪ್ಪಿಸಲು ಬಂದ ಸೊಸೆಗೆ ಗಾಯಗಳಾಗಿವೆ. ಸೊಸೆ ನೀಡಿರುವ ಹೇಳಿಕೆಯನ್ನ ಆಧರಿಸಿ ಪೊಲೀಸರು ವೃದ್ಧ ಆರೋಪಿಯನ್ನ ಬಂಧಿಸಿದ್ದಾರೆ.

ವೃದ್ಧ ದಂಪತಿಗೆ ಆರು ಮಂದಿ ಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿದೆ. ಇವರಲ್ಲಿ ಮೂವರು ಮಕ್ಕಳು ತಂದೆ – ತಾಯಿಯೊಂದಿಗೆ ವಾಸವಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...