75 ವರ್ಷದ ವಿಯೆಟ್ನಾಂ ಮಹಿಳೆ ಅಚ್ಚರಿಯ ಹೇಳಿಕೆ ನೀಡಿ ಎಲ್ಲರನ್ನು ದಂಗಾಗಿಸಿದ್ದಾಳೆ. ಆಕೆ ಕಳೆದ 50 ವರ್ಷಗಳಿಂದ ಯಾವುದೇ ಘನ ಆಹಾರವನ್ನು ಸೇವಿಸಿಲ್ಲ. ನೀರು ಮತ್ತು ಸಕ್ಕರೆಯ ತಂಪು ಪಾನೀಯಗಳನ್ನು ಮಾತ್ರ ಕುಡಿಯುತ್ತಿದ್ದಾಳೆ. ವಿಯೆಟ್ನಾಂನ ಕ್ವಾಂಗ್ ಬಿನ್ಹ್ ಪ್ರಾಂತ್ಯದ ಲೋಕ್ ನಿನ್ಹ್ ಕಮ್ಯೂನ್ ಆಕೆ ಹೆಸರು. ಆಕೆ ಬರಿ ನೀರು ಮತ್ತು ಕೋಲ್ಡ್ ಡ್ರಿಂಕ್ ಸೇವನೆ ಮಾಡ್ತಾ ಇದ್ರೂ ಆಕೆ ಆರೋಗ್ಯವಾಗಿರೋದು ಅಚ್ಚರಿ ಸಂಗತಿ.
1963ರಲ್ಲಿ ಇದ್ರ ಆರಂಭವಾಗಿದೆ ಎನ್ನುತ್ತಾಳೆ ಲೋಕ್. ಯುದ್ಧದ ಸಮಯದಲ್ಲಿ ಸೈನಿಕರಿಗೆ ಆಹಾರ ನೀಡಲು ಅವರು ಪರ್ವತಗಳನ್ನು ಏರಿ ಹೋಗ್ತಿದ್ದರಂತೆ. ಒಂದು ದಿನ ಬೆಂಕಿ ಬಿದ್ದು ಲೋಕ್ ಗಾಯಗೊಂಡಿದ್ದಳು. ಆಕೆ ಪ್ರಜ್ಞೆ ತಪ್ಪಿದ್ದ ಕಾರಣ ಕೆಲ ದಿನ ವಿಶ್ರಾಂತಿ ಅಗತ್ಯವಾಯ್ತು. ಆ ವೇಳೆ ಆಕೆ ಸ್ನೇಹಿತೆಯರು ಸಿಹಿ ನೀರನ್ನು ಕುಡಿಯಲು ನೀಡ್ತಿದ್ದರಂತೆ. ನಿಧಾನವಾಗಿ ಲೋಕ್ ಹಣ್ಣುಗಳನ್ನು ಸೇವಿಸಲು ಶುರು ಮಾಡಿದ್ದಳಂತೆ. ಆದ್ರೆ ತನಗೆ ಈ ಆಹಾರದ ಅವಶ್ಯಕತೆ ಇಲ್ಲ ಎಂಬುದು ಲೋಕ್ ಅರಿವಿಗೆ ಬಂತಂತೆ. ಹಾಗಾಗಿ ಆಕೆ 1970ರಿಂದ ಘನ ಆಹಾರವನ್ನು ಸಂಪೂರ್ಣ ತ್ಯಜಿಸಿದ್ದಾಳೆ. ಅಲ್ಲಿಂದ ಇಲ್ಲಿಯವರೆಗೂ ಲೋಕ್ ಬರೀ ನೀರು ಮತ್ತು ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡಿ ಜೀವನ ಮಾಡ್ತಿದ್ದಾಳೆ.
ಆಕೆ ಮಕ್ಕಳಿಗೆ ಆಹಾರ ತಯಾರಿಸಿದ್ರೂ ತಿನ್ನುತ್ತಿರಲಿಲ್ಲವಂತೆ. ಈಗ ಮಕ್ಕಳು ಕೆಲಸದ ಮೇಲೆ ಬೇರೆ ಊರಿಗೆ ಹೋಗಿದ್ದಾರೆ. ಲೋಕ್ ಅಡುಗೆ ಮನೆ ಧೂಳು ಹಿಡಿದಿದೆ. ನೀರು ಮತ್ತು ಕೋಲ್ಡ್ ಡ್ರಿಂಕ್ಸ್ ಸೇವನೆ ಮಾಡಿದ್ರೂ ಲೋಕ್ ಗಟ್ಟಿಮುಟ್ಟಾಗಿದ್ದಾಳೆ. ಕೋಲ್ಡ್ ಡ್ರಿಂಕ್ಸ್ ಆರೋಗ್ಯ ಹಾಳು ಮಾಡುತ್ತೆ ಎನ್ನುವ ವೈದ್ಯರಿಗೆ ಈಕೆ ಸವಾಲಾಗಿದ್ದಾಳೆ.