ಚಂಡೀಗಢ: ಶೇಕಡ 71 ಮಕ್ಕಳಲ್ಲಿ ಪ್ರತಿಕಾಯಗಳ ಅಭಿವೃದ್ಧಿಯಾಗಿದ್ದು, ಕೊರೋನಾ ಮೂರನೇ ಅಲೆ ಸಮಯದಲ್ಲಿ ಅವರ ಮೇಲೆ ಪರಿಣಾಮ ಬೀರುವುದಿಲ್ಲ ಎಂದು PGIMER ನಿರ್ದೇಶಕ ಹೇಳಿದ್ದಾರೆ.
ಚಂಡಿಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ನಡೆಸಿರುವ ಸರ್ವೇಯಲ್ಲಿ ಶೇಕಡ 71 ರಷ್ಟು ಮಕ್ಕಳ ಮಾದರಿಗಳು ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸಿರುವುದನ್ನು ತೋರಿಸಿದೆ ಎಂದು ಪಿಜಿಐಎಂಇಆರ್ ನಿರ್ದೇಶಕ ಡಾ. ಜಗತ್ ರಾಮ್ ಸೋಮವಾರ ತಿಳಿಸಿದ್ದಾರೆ.
2,700 ಮಕ್ಕಳಲ್ಲಿ ಸೆರೋ ಸರ್ವೇ ನಡೆಸಲಾಗಿದೆ. ಸಮೀಕ್ಷೆಯ ಕುರಿತು ಪ್ರತಿಕ್ರಿಯಿಸಿದ ಡಾ. ಜಗತ್ ರಾಮ್ ಅವರು, ನಾವು ಕೋವಿಡ್ -19 ಸಾಂಕ್ರಾಮಿಕ ರೋಗದ 3 ನೇ ಅಲೆಯ ಆರಂಭದಲ್ಲಿದ್ದೇವೆ. 2700 ಮಕ್ಕಳಲ್ಲಿ ಚಂಡೀಗಡದ ಪಿಜಿಐಎಂಇಆರ್ ನಡೆಸಿದ ಸೆರೋ ಸರ್ವೇ 71 ಪ್ರತಿಶತದಷ್ಟು ಪ್ರತಿಕಾಯಗಳ ಅಭಿವೃದ್ಧಿಯಾಗಿರುವುದನ್ನು ತೋರಿಸುತ್ತದೆ. ಮೂರನೇ ಅಲೆ ಸಮಯದಲ್ಲಿ ಮಕ್ಕಳ ಮೇಲೆ ಅಂತಹ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಮಾದರಿಗಳನ್ನು ಚಂಡೀಗಢ ವ್ಯಾಪ್ತಿಯ ಗ್ರಾಮೀಣ, ನಗರ ಪ್ರದೇಶಗಳು ಮತ್ತು ಕೊಳೆಗೇರಿ ನಿವಾಸಿ ಮಕ್ಕಳಿಂದ ಸಂಗ್ರಹಿಸಲಾಗಿದೆ. ಸುಮಾರು ಶೇಕಡ 69 ರಿಂದ 73 ರಷ್ಟು ಮಕ್ಕಳಲ್ಲಿ ಪ್ರತಿಕಾಯಗಳ ಅಭಿವೃದ್ಧಿಯಾಗಿದೆ. ಸರಾಸರಿ 71 ಪ್ರತಿಶತದಷ್ಟು ಮಾದರಿಗಳು ಪ್ರತಿಕಾಯಗಳ ಅಭಿವೃದ್ಧಿಯಾಗಿರುವುದು ಗೊತ್ತಾಗಿದೆ. ಮಕ್ಕಳಿಗೆ ಸದ್ಯಕ್ಕೆ ಯಾವುದೇ ಲಸಿಕೆಗಳು ಲಭ್ಯವಿಲ್ಲ. COVID-19 ತಡೆಯುವ ಪ್ರತಿಕಾಯಗಳು ಅಭಿವೃದ್ಧಿಗೊಂಡಿವೆ. ಮೂರನೇ ತರಂಗವು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಅನಿಸುತ್ತದೆ ಎಂದಿದ್ದಾರೆ.
ಮಹಾರಾಷ್ಟ್ರ ಮತ್ತು ದೆಹಲಿಯ ಸಮೀಕ್ಷೆಯು ಶೇಕಡ 50-75 ರಷ್ಟು ಮಕ್ಕಳ ಪ್ರತಿಕಾಯಗಳ ವೃದ್ಧಿಯಾಗಿರುವುದನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದು, ಹೀಗಾಗಿ ವಿವಿಧ ಸಮೀಕ್ಷೆಗಳು ಮೂರನೇ ತರಂಗವು ಮಕ್ಕಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ತೋರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಜನರು ಕೋವಿಡ್ ಮಾರ್ಗಸೂಚಿ ಅನುಸರಿಸಬೇಕು. ಅರ್ಹರು ಲಸಿಕೆ ತೆಗೆದುಕೊಳ್ಳಬೇಕು. ಶೇಕಡ 6 ರಿಂದ 10 ರಷ್ಟು ರೋಗಿಗಳಲ್ಲಿ ಸೋಂಕು ಕಂಡುಬರುತ್ತದೆ. ಸೋಂಕು ಏರುಗತಿ ಇದ್ದರೂ, ತೀವ್ರತೆ ತುಂಬಾ ಕಡಿಮೆಯಾಗಿರಲಿದೆ ಎಂದು ಹೇಳಿದ್ದಾರೆ.