ಮೇಷ ರಾಶಿ: ಇಂದು ಆರ್ಥಿಕ ಲಾಭದ ಯೋಗವಿದೆ. ವಿದೇಶದಲ್ಲಿ ನೆಲೆಸಿರುವ ಸಂಬಂಧಿಕರಿಂದ ಶುಭ ಸಮಾಚಾರ ದೊರೆಯಲಿದೆ. ಧಾರ್ಮಿಕ ಕಾರ್ಯ ಅಥವಾ ಪ್ರವಾಸದಿಂದ ಹಣ ಖರ್ಚಾಗಲಿದೆ. ಒಡಹುಟ್ಟಿದವರಿಂದ್ಲೂ ಲಾಭವಾಗುವ ಸಾಧ್ಯತೆ ಇದೆ.
ವೃಷಭ ರಾಶಿ: ಇವತ್ತಿನ ದಿನ ನಿಮಗೆ ಲಾಭದಾಯಕವಾಗಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ಧನಲಾಭದ ಸಂಭವವೂ ಇದೆ. ಮಿತ್ರರು ಅದರಲ್ಲೂ ಗೆಳತಿಯರಿಂದ ಲಾಭವಿದೆ.
ಮಿಥುನ ರಾಶಿ: ಆರ್ಥಿಕ ವಿಷಯದಲ್ಲಿ ಯೋಜನೆ ರೂಪಿಸುತ್ತೀರಿ. ಧನಲಾಭದ ಸಂಭವವೂ ಇದೆ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಹೊಸ ವಸ್ತ್ರ, ಆಭರಣ ಖರೀದಿಸುವ ಸಾಧ್ಯತೆ ಇದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಲಿದೆ.
ಕರ್ಕ ರಾಶಿ: ಇವತ್ತು ನಿಮ್ಮ ಖರ್ಚು ಹೆಚ್ಚಲಿದೆ. ಮಾನಸಿಕವಾಗಿ ಚಿಂತೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಈಶ್ವರನನ್ನು ಆರಾಧಿಸಿ. ಆಧ್ಯಾತ್ಮದೆಡೆಗೆ ಮನಸ್ಸು ಹರಿಸಿದ್ರೆ ಶಾಂತಿ ದೊರೆಯಲಿದೆ.
ಸಿಂಹ ರಾಶಿ: ಶತ್ರುಗಳ ಬಗ್ಗೆ ಎಚ್ಚರಿಕೆಯಿಂದಿರಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ಏನಾದ್ರೂ ಸಾಧನೆ ಮಾಡಲು ಇವತ್ತು ಶುಭ ದಿನ. ಬಹಳ ಪ್ರಯತ್ನದ ನಂತರ ಮಾನಸಿಕ ಶಾಂತಿಯನ್ನು ಮರಳಿ ಪಡೆಯಲಿದ್ದೀರಿ.
ಕನ್ಯಾ ರಾಶಿ: ವ್ಯರ್ಥವಾಗಿ ಹಣ ಖರ್ಚಾಗಲಿದೆ. ಮನೆ ಮತ್ತು ಕಚೇರಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಇದರಿಂದ ನಿಮಗೆ ಲಾಭವಾಗಲಿದೆ. ಇವತ್ತಿನ ದಿನ ನಿಮ್ಮ ಪಾಲಿಗೆ ಸಾಮಾನ್ಯವಾಗಿದೆ.
ತುಲಾ ರಾಶಿ: ಉತ್ತಮ ಭೋಜನ ಹಾಗೂ ಹೊಸ ಬಟ್ಟೆ ದೊರೆಯಲಿದೆ. ವ್ಯಾಪಾರ ಮತ್ತು ಪಾಲುದಾರಿಕೆಯಲ್ಲಿ ಲಾಭವಾಗಲಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಸಿಗಲಿದೆ. ಸಂಗಾತಿಯ ಜೊತೆಗೆ ಆನಂದದಿಂದ ಸಮಯ ಕಳೆಯಲಿದ್ದೀರಿ.
ವೃಶ್ಚಿಕ ರಾಶಿ: ನಿಮ್ಮ ಕೆಲಸದ ಮೂಲಕ ಹಿರಿಯ ಅಧಿಕಾರಿಗಳ ಮೆಚ್ಚುಗೆ ಪಡೆಯುತ್ತೀರಿ. ತಂದೆಯಿಂದ ಲಾಭವಾಗಲಿದೆ. ಸಂಪತ್ತು ಮತ್ತು ವಾಹನಕ್ಕೆ ಸಂಬಂಧಿಸಿದ ಕೆಲಸಗಳು ಯಶಸ್ವಿಯಾಗಲಿವೆ. ಸರ್ಕಾರಿ ಕೆಲಸದಲ್ಲೂ ಯಶಸ್ಸು ಸಿಗಲಿದೆ.
ಧನು ರಾಶಿ: ಸಾರ್ವಜನಿಕವಾಗಿ ಮಾನಹಾನಿಯಾಗದಂತೆ ಎಚ್ಚರವಹಿಸಿ. ಶಾಶ್ವತ ಸ್ವತ್ತು ಮತ್ತು ವಾಹನ ದಸ್ತಾವೇಜು ವಿಚಾರದಲ್ಲೂ ಜಾಗರೂಕತೆಯಿಂದ ಇರುವುದು ಒಳಿತು. ಸೌಂದರ್ಯ ವರ್ಧಕ, ವಸ್ತ್ರ ಮತ್ತು ಆಭರಣಗಳಿಗಾಗಿ ಮಹಿಳೆಯರು ಹಣ ಖರ್ಚು ಮಾಡುತ್ತಾರೆ.
ಮಕರ ರಾಶಿ: ಒಡಹುಟ್ಟಿದವರಿಂದ ಲಾಭವಾಗಲಿದೆ. ಕೈಗೊಂಡ ಕಾರ್ಯ ಯಶಸ್ವಿಯಾಗಲಿದೆ. ಸಾರ್ವಜನಿಕ ಬದುಕಿನಲ್ಲಿ ಗೌರವ ದೊರೆಯಲಿದೆ. ಪ್ರತಿಸ್ಪರ್ಧಿಗಳ ವಿರುದ್ಧ ಗೆಲುವು ನಿಶ್ಚಿತ.
ಕುಂಭ ರಾಶಿ: ಇವತ್ತು ಮನಸ್ಸಿನಲ್ಲಿ ಅಶಾಂತಿಯ ಭಾವ ಇರಲಿದೆ. ಇಂದು ಯಾವುದೇ ಮಹತ್ವದ ನಿರ್ಣಯ ತೆಗೆದುಕೊಳ್ಳಬೇಡಿ. ಅದೃಷ್ಟ ಇವತ್ತು ನಿಮ್ಮ ಜೊತೆಗಿಲ್ಲ. ಇದರಿಂದ ನಿರಾಸೆ ನಿಮ್ಮನ್ನು ಆವರಿಸಲಿದೆ.
ಮೀನ ರಾಶಿ: ಯಶಸ್ಸು, ಕೀರ್ತಿ ಮತ್ತು ಸಂತೋಷ ಇವತ್ತು ದೊರೆಯಲಿದೆ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ. ಪ್ರತಿಸ್ಪರ್ಧಿಗಳು ಮತ್ತು ಶತ್ರುಗಳ ವಿರುದ್ಧ ವಿಜಯ ದೊರೆಯಲಿದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲ ಸಿಗಲಿದೆ.