
‘ಮನಿಕೆ ಮಗೆ ಹಿತೆ’ ಗೆ ನೃತ್ಯ ಮಾಡಿದ ಬೆಂಗಾಲಿ ನಟಿ ಶ್ರೀಲೇಖಾ ಮಿತ್ರಾ: ವಿಡಿಯೋ ವೈರಲ್
ಚಿತ್ರ ನಟಿ ಕಂ ಸಂಸದೆಯಾಗಿರುವ ಮಿಮಿಯ ಐಫೋನ್ 13ನ ಗ್ಯಾಲರಿಯಲ್ಲಿರುವ ಚಿತ್ರಗಳು ಹಾಗೂ ವಿಡಿಯೋಗಳು ಡಿಲೀಟ್ ಆಗಿವೆ. ಅವರು ಬಳಸುವ ಫೋನ್ ಅನ್ನು ಆಪಲ್ ಇದೇ ಸೆಪ್ಟೆಂಬರ್ 14ರಂದು ಬಿಡುಗಡೆ ಮಾಡಿತ್ತು.
“7000 ಚಿತ್ರಗಳು, 500 ವಿಡಿಯೋಗಳು. ನನ್ನ ಗ್ಯಾಲರಿಯಿಂದ ಎಲ್ಲವೂ ಡಿಲೀಟ್ ಆಗಿವೆ ನನಗೆ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಅಳಲೋ ಜೋರಾಗಿ ಅಳಲೋ ತಿಳಿಯುತ್ತಿಲ್ಲ. ವಿ.ಸೂ: ನಾನು ಮಾಡಿದ ಎಲ್ಲಾ ಯತ್ನಗಳೂ ವಿಫಲವಾಗಿವೆ,” ಎಂದು ಹೇಳಿಕೊಂಡಿರುವ ಮಿಮಿ, ತಮ್ಮ ಟ್ವೀಟ್‌ಗೆ ಆಪಲ್ ಅನ್ನು ಟ್ಯಾಗ್ ಮಾಡಿದ್ದಾರೆ.
ಬಿಟ್ ಕಾಯಿನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ; ಸಿದ್ದರಾಮಯ್ಯ ತಿರುಗೇಟು
ಮಿಮಿ ನೋವನ್ನು ಕಂಡ ನೆಟ್ಟಿಗರೊಬ್ಬರು ಗ್ಯಾಲರಿಯಲ್ಲಿ ಡಿಲೀಟ್ ಆಗಿರುವ ಕಂಟೆಂಟ್ ಅನ್ನು ಹೊರತೆಗೆಯುವುದು ಹೇಗೆ ಎಂದು ತಿಳಿಸಿದರೆ ಮತ್ತೊಬ್ಬರು, ಇವೆಲ್ಲದರ ನಡುವೆ ಕ್ಷೇತ್ರದ ಜನರಿಗೆ ಕೊಡಲು ಸಹ ಸ್ವಲ್ಪ ಟೈಂ ಇಡಿ ಎಂದು ಸಂಸದೆಯ ಕಾಲು ಎಳೆದಿದ್ದಾರೆ.