ಜಗತ್ತಿನಲ್ಲಿ ಇರಬಹುದಾದ ಅತ್ಯಂತ ನಾಜೂಕಿನ ಕುಸುರಿ ಕಲೆ ಎಂದರೆ ಇದೇ ಎನ್ನುವಂಥ ಕೆಲಸವೊಂದನ್ನು ಗ್ವಾಲಿಯರ್‌ನ 70 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಮಾಡಿ ತೋರಿದ್ದಾರೆ.
ಗಾಜಿನ ಪದಾರ್ಥಗಳ ಮೇಲೆ ಕೆತ್ತನೆ ಮಾಡುವ ಕಲೆ ಕರಗತ ಮಾಡಿಕೊಂಡಿರುವ ವಿಮಲ್ ಚಂದ್ರ ಜೈನ್, ಬಲ್ಬ್ ಒಂದರ ಮೇಲೆ ಪುಟ್ಟ ಸುತ್ತಿಗೆ ಹಾಗೂ ಉಳಿ ಬಳಸಿಕೊಂಡು ’ನಮೋಕರ್ ಮಂತ್ರ’ ಕೆತ್ತಿದ್ದಾರೆ. ಪಾತ್ರೆಗಳ ಮೇಲೆ ಹೆಸರುಗಳನ್ನು ಕೆತ್ತುವ ಅಭ್ಯಾಸ ಇರುವ ಜೈನ್‌ರ ಕುಟುಂಬ ಇದರದ್ದೇ ಅಂಗಡಿಯೊಂದನ್ನು ಇಟ್ಟುಕೊಂಡಿದೆ.
ಸಂಸ್ಕರಣಾ ಶುಲ್ಕವಿಲ್ಲದೆ ಶೇ.6.70ರ ದರದಲ್ಲಿ ಈ ಬ್ಯಾಂಕ್ ನೀಡ್ತಿದೆ ಗೃಹ ಸಾಲ
“ಅಂಗಡಿಯಲ್ಲಿ ಕುಳಿತು ನನ್ನ ಚಿಕ್ಕಪ್ಪನ ಕೆಲಸವನ್ನು ಹತ್ತಿರದಿಂದ ಗಮನಿಸುತ್ತಿದ್ದೆ. ಈ ಕಲೆಯನ್ನು ನಾನು ಹಾಗೆ ಕಲಿತೆ. ಮೊದಲಿಗೆ ಪಾತ್ರೆಗಳ ಮೇಲೆ ಒಂದೆರಡು ಅಕ್ಷರಗಳನ್ನು ಕೆತ್ತನೆ ಮಾಡುವುದರಿಂದ ಆರಂಭಿಸಿದ ನಾನು ಬಳಿಕ ಅಭ್ಯಾಸವಾಗುತ್ತಾ ಸಾಗಿದಂತೆ ಪದಕಗಳು, ಫಲಕಗಳು ಹಾಗೂ ಗಡಿಯಾರದಂಥ ಉಡುಗೊರೆ ಪದಾರ್ಥಗಳ ಮೇಲೆ ಕೆತ್ತಲು ಆರಂಭಿಸಿದ್ದಲ್ಲದೇ ನನ್ನ ಕೌಶಲ್ಯ ವರ್ಧನೆಯಾಗುತ್ತಾ ಸಾಗಿದಂತೆ ಮೊಬೈಲ್ ಫೋನ್‌ಗಳ ಪ್ಲಾಸ್ಟಿಕ್ ಭಾಗದ ಮೇಲೂ ಕೆತ್ತನೆ ಮಾಡಲು ಆರಂಭಿಸಿದೆ” ಎಂದು ತಿಳಿಸಿದ್ದಾರೆ ಜೈನ್.
“ಬಳಿಕ ಜೈಪುರದಿಂದ ಗಾಜಿನ ಮೇಲೆ ಕೆತ್ತಲು ಬಳಸುವ ವಿಶೇಷ ವಸ್ತುಗಳನ್ನು ತಂದೆ. ಅವುಗಳೊಂದಿಗೆ ಕೆಲಸ ಮಾಡುವುದು ಕಷ್ಟವಾಗಿತ್ತು. ಆದರೆ ನಿಧಾನವಾಗಿ ನಾನು ಆ ಕಲೆಯನ್ನು ಕರಗತ ಮಾಡಿಕೊಂಡೆ. ಕನ್ನಡಿಯಿಂದ ಆರಂಭಿಸಿದ ನಾನು ನಂತರದಲ್ಲಿ ಗಾಜಿನ ಬೇರೆ ಬೇರೆ ಪದಾರ್ಥಗಳ ಮೇಲೆ ಕೆಲಸ ಮಾಡಲು ಆರಂಭಿಸಿದೆ” ಎಂದು ವಿವರಿಸಿದ ಜೈನ್, ಬಲ್ಬ್ ಕಲೆಯ ಬಗ್ಗೆ ವಿವರಿಸುತ್ತಾ, “ಬಲ್ಬ್ ಗಾಜು ಬಹಳ ಸೂಕ್ಷ್ಮ. ಆರಂಭದಲ್ಲಿ ನಾನು ಒಂದೆರಡು ಬಲ್ಬ್‌ಗಳನ್ನು ಒಡೆದು ಹಾಕಿದೆ. ಅದರ ಮೇಲೆ ಅಕ್ಷರಗಳನ್ನು ಕೆತ್ತಬೇಕಾದರೆ ನಾನು ಬಹಳ ಎಚ್ಚರಿಕೆಯಿಂದ ಇರಬೇಕಾಗಿತ್ತು” ಎಂದಿದ್ದಾರೆ.
“ಮೊದಲಿಗೆ ಕೆಲವೇ ಅಕ್ಷರಗಳಿಂದ ಆರಂಭಿಸಿ, ಅಂತಿಮವಾಗಿ ದೇವರ ಹೆಸರನ್ನು ಬರೆಯಲು ಸಫಲನಾದೆ. ಕೊನೆಗೆ ಬಲ್ಬ್ ಮೇಲೆ ’ನಮೋಕರ್ ಮಂತ್ರ’ ಕೆತ್ತಲು ಸಾಧ್ಯವಾಯಿತು. 10-12 ವರ್ಷಗಳಿಂದ ನಾನು ಗಾಜಿನ ಮೇಲೆ ಕೆತ್ತನೆ ಮಾಡುತ್ತಿದ್ದೇನೆ. ಬಲ್ಬ್ ಮೇಲೆ ಮಂತ್ರದ ಕೆತ್ತನೆ ಮಾಡಲು 2-3 ಗಂಟೆಗಳು ಬೇಕಾಗುತ್ತವೆ” ಎಂದಿದ್ದಾರೆ ಜೈನ್.