alex Certify ಭಾರತದ ‘ಒಮಿಕ್ರಾನ್’ ಸೋಂಕಿತರ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ‘ಒಮಿಕ್ರಾನ್’ ಸೋಂಕಿತರ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಭಾರತದಲ್ಲಿನ ಹೆಚ್ಚಿನ ಓಮಿಕ್ರಾನ್ ಪ್ರಕರಣಗಳು ಲಕ್ಷಣರಹಿತವಾಗಿವೆ ಮತ್ತು ಸಂಪೂರ್ಣವಾಗಿ ಲಸಿಕೆಯನ್ನು ಪಡೆದವರಲ್ಲಿ ಪತ್ತೆಯಾಗಿವೆ ಎಂದು ಸರ್ಕಾರದ ವಿಶ್ಲೇಷಣೆಯಲ್ಲಿ ಪತ್ತೆಯಾಗಿದೆ.

ವಿದೇಶದಿಂದ ವಾಪಸ್ಸಾದವರಲ್ಲಿ ಪ್ರಕರಣಗಳು ಹೆಚ್ಚಾಗಿ ಪತ್ತೆಯಾಗಿವೆ. ದೇಶದಲ್ಲಿನ 183 ಓಮಿಕ್ರಾನ್ ಪ್ರಕರಣಗಳ ಮೂಲಭೂತ ಅಧ್ಯಯನವನ್ನು ಕೇಂದ್ರ ಆರೋಗ್ಯ ಇಲಾಖೆ ಅದರ ರಿಸಲ್ಟ್ ನೀಡಿದೆ‌. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಈ ವಿಶ್ಲೇಷಣೆಯನ್ನು ಪ್ರಸ್ತುತ ಪಡಿಸಿದ್ದಾರೆ.

ವಿಶ್ಲೇಷಣೆಯಲ್ಲಿ, 70 % ಒಮಿಕ್ರಾನ್ ಪ್ರಕರಣಗಳು ಲಕ್ಷಣರಹಿತವಾಗಿವೆ ಮತ್ತು 30% ಪ್ರತಿಶತ ಪ್ರಕರಣಗಳಲ್ಲಿ ರೋಗಲಕ್ಷಣಗಳಿವೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ.

ಹೊಸ ರೂಪಾಂತರದ 73% ಪ್ರಕರಣಗಳು ವಿದೇಶಿ ಪ್ರಯಾಣದ ಇತಿಹಾಸ ಹೊಂದಿರುವವರಲ್ಲಿ ವರದಿಯಾಗಿದೆ, 27% ರೋಗಿಗಳು ವಿದೇಶ ಪ್ರಯಾಣದ ಇತಿಹಾಸ ಹೊಂದಿಲ್ಲ.

ಸಂಪೂರ್ಣ ಲಸಿಕೆಯನ್ನು ಪಡೆದವರಲ್ಲಿ ಹೆಚ್ಚಿನ ಪ್ರಕರಣಗಳು, ಅಂದರೆ 91 ಪ್ರತಿಶತವು ವರದಿಯಾಗಿದೆ, ಆದರೆ ಲಸಿಕೆ ಹಾಕದವರಲ್ಲಿ ಕೇವಲ 7 ಪ್ರತಿಶತ ಮಾತ್ರ ವರದಿಯಾಗಿದೆ ಎಂದು ವಿಶ್ಲೇಷಣೆ ಸೂಚಿಸಿದೆ. ಉಳಿದ 2% ಪ್ರಕರಣಗಳು ಭಾಗಶಃ ಲಸಿಕೆಯನ್ನು ಪಡೆದವರಲ್ಲಿ ವರದಿಯಾಗಿದೆ.

ನೈತಿಕ ಬೆಂಬಲ ತಿರಸ್ಕಾರ, ಕರ್ನಾಟಕ ಬಂದ್ ಗೆ ಬೀದಿಗಿಳಿದು ಬೆಂಬಲ ನೀಡಬೇಕು: ವಾಟಾಳ್ ನಾಗರಾಜ್

ಡೆಲ್ಟಾಕ್ಕಿಂತ ಓಮಿಕ್ರಾನ್ ವೇಗವಾಗಿ ಹರಡುತ್ತಿದ್ದು, ಇದು ಸಮುದಾಯಗಳ ಮೂಲಕ ವೇಗವಾಗಿ ಹರಡುತ್ತಿದೆ ಎಂದು ರಾಜೇಶ್ ಭೂಷಣ್ ಹೇಳಿದ್ದಾರೆ.

ಒಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಡೆಲ್ಟಾ ರೂಪಾಂತರವು ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ತಿಳಿಸಿದ್ದಾರೆ. ಇಲ್ಲಿಯವರೆಗೆ, 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 358 ಒಮಿಕ್ರಾನ್ ರೂಪಾಂತರದ ಪ್ರಕರಣಗಳು ವರದಿಯಾಗಿವೆ ಎಂದು ಭೂಷಣ್ ಹೇಳಿದ್ದಾರೆ.‌

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...