ಘಾಜಿಯಾಬಾದ್: ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆ ನಿಂಬೆಹಣ್ಣಿನ ಬೆಲೆ ಗಗನಕ್ಕೇರಿದೆ. ಒಂದು ನಿಂಬೆಹಣ್ಣಿನ ಬೆಲೆ 5 ರಿಂದ 10 ರೂ.ವರೆಗೆ ಇದೆ. ಈ ನಡುವೆ ಕಳ್ಳನೊಬ್ಬ 70 ಸಾವಿರ ಮೌಲ್ಯದ 12 ಮೂಟೆ ನಿಂಬೆಹಣ್ಣನ್ನು ಕದ್ದು ಪರಾರಿಯಾಗಿರುವ ಘಟನೆ ಘಾಜಿಯಾಬಾದಿನ ಮೋದಿ ನಗರದ ಮಾರುಕಟ್ಟೆಯಲ್ಲಿ ನಡೆದಿದೆ. ಇನ್ನೊಂದು ವಿಶೇಷ ಎಂದರೆ ಕಳ್ಳರು ಬೇರೆ ಯಾವುದೇ ತರಕಾರಿಯನ್ನು ತೆಗೆದುಕೊಂಡು ಹೋಗಿಲ್ಲ.
ಭೋಜ್ಪುರ ನಿವಾಸಿ ರಶೀದ್ ಎಂಬ ವ್ಯಕ್ತಿ ಘಾಜಿಯಾಬಾದ್ ನ ಮೋದಿನಗರ-ಹಾಪುರ್ ರಸ್ತೆಯಲ್ಲಿರುವ ಗಡನಾ ಗ್ರಾಮದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದು, ಈತನ ಅಂಗಡಿಯಿಂದ ನಿಂಬೆಹಣ್ಣುಗಳನ್ನು ಕಳವು ಮಾಡಲಾಗಿದೆ. ಬುಧವಾರ ಮಾರುಕಟ್ಟೆಯ ತನ್ನ ಅಂಗಡಿಗೆ ಬಂದ ರಶೀದ್ ಬಾಗಿಲು ತೆರೆದು ನೋಡಿದಾಗ ಬೇರೆ ತರಕಾರಿ ಬಿಟ್ಟು, ನಿಂಬೆಹಣ್ಣು ಮಾತ್ರ ಕಳುವಾಗಿತ್ತು.
BIG NEWS: ಆಸಿಡ್ ಸಂತ್ರಸ್ತರ ಮಾಸಾಶನ ಹೆಚ್ಚಳ; ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ
ಇತ್ತೀಚೆಗೆ ನಿಂಬೆಹಣ್ನು ಕಳ್ಳತನ ಹೆಚ್ಚಾಗುತ್ತಿರುವ ಹಿನ್ನೆಲೆ ಮಾರುಕಟ್ಟೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆದರೂ 70 ಸಾವಿರ ಮೌಲ್ಯದ ಹನ್ನೆರಡು ಮೂಟೆ ನಿಂಬೆಹಣ್ಣು ಕಳ್ಳತನವಾಗಿದೆ.
ಇದೇ ರೀತಿಯ ಇನ್ನೊಂದು ಘಟನೆ ಏಪ್ರಿಲ್ನಲ್ಲಿ, ಉತ್ತರ ಪ್ರದೇಶದ ಶಹಜಹಾನ್ ಪುರದಲ್ಲಿ ನಡೆದಿತ್ತು. ಕಳ್ಳರು ತರಕಾರಿ ವ್ಯಾಪಾರಿಯ ಗೋಡೌನ್ ನಲ್ಲಿ ಸಂಗ್ರಹಿಸಲಾಗಿದ್ದ ಕನಿಷ್ಠ 60 ಕೆಜಿ ನಿಂಬೆಹಣ್ಣುಗಳನ್ನು ಕದ್ದಿದ್ದರು. ಇದರ ಜೊತೆಗೆ ತಿಲ್ಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಗೋದಾಮಿನಲ್ಲಿ 40 ಕೆಜಿ ಈರುಳ್ಳಿ ಮತ್ತು 38 ಕೆಜಿ ಬೆಳ್ಳುಳ್ಳಿಯನ್ನು ಕಳ್ಳತನ ಮಾಡಿದ್ದರು.