
ನಮ್ಮಲ್ಲಿ ಕೆಲವರು ಅಡುಗೆ ಮನೆಯಲ್ಲಿ ಕಷ್ಟಪಡುತ್ತಿರುವಾಗ 7 ವರ್ಷದ ಬಾಲಕ ತನ್ನ ಅಡುಗೆ ಕೌಶಲ್ಯದಿಂದ ಇಂಟರ್ನೆಟ್ನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ರಾಜಸ್ಥಾನಿ ಪಾಪಡ್ ಕಿ ಸಬ್ಜಿಯಿಂದ ಚಾಕೊಲೇಟ್ ಕೇಕ್ವರೆಗೆ ಈ ಹುಡುಗ ತನ್ನ ಅಡುಗೆ ಮನೆಯಲ್ಲಿ ಮಾಡದ ತಿನಿಸುಗಳೇ ಇಲ್ಲ. ಇದೀಗ ವೈರಲ್ ಆಗಿರುವ ಮತ್ತು ಕಳೆದ ತಿಂಗಳು ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ಈ ಪುಟ್ಟ ಬಾಲಕ ಜಿಲೇಬಿ ಮಾಡುವುದನ್ನು ಕಾಣಬಹುದು.
ನಮ್ಮಲ್ಲಿ ಕೆಲವರು ಅಡುಗೆ ಮನೆಯಲ್ಲಿ ಜಿಲೇಬಿ ಮಾಡುವುದನ್ನು ಕಲ್ಪಿಸಿಕೊಳ್ಳಲೂ ಭಯ ಪಡುವಾಗ ಈ ಪುಟ್ಟ ಬಾಲಕ ಸಲೀಸಾಗಿ ಅದನ್ನು ಮಾಡುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋದಲ್ಲಿ ಬಾಲಕ ಮೊದಲು ಸಕ್ಕರೆ ಪಾಕವನ್ನು ತಯಾರಿಸಿದ್ದಾನೆ. ನಂತರ ಸಣ್ಣ ಪ್ರಮಾಣದಲ್ಲಿ ಹಿಟ್ಟನ್ನು ಕೋನ್‌ನಲ್ಲಿ ಹಾಕಿ ಸಣ್ಣ ಸಣ್ಣ ಜಿಲೇಬಿಗಳನ್ನು ಮಾಡಿರುವುದನ್ನು ನೋಡಬಹುದು.
ಚಿಕ್ಕ ಹುಡುಗನ ಅಡುಗೆ ಯಾತ್ರೆಯಿಂದ ಅಂತರ್ಜಾಲವು ಪ್ರಭಾವಿತವಾಗಿದೆ. ಕಾಮೆಂಟ್‌ಗಳ ವಿಭಾಗವು “ಮುದ್ದಾದ”, “ವಾವ್” ಮತ್ತು “ಅದ್ಭುತ” ನಂತಹ ಪದಗಳಿಂದ ತುಂಬಿಹೋಗಿದೆ.