alex Certify ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿ‌ ದಾಖಲೆ ಬರೆದ 7 ವರ್ಷದ ಬಾಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಏರಿ‌ ದಾಖಲೆ ಬರೆದ 7 ವರ್ಷದ ಬಾಲೆ

ಪಂಜಾಬಿನ 7 ವರ್ಷದ ಬಾಲಕಿ ಸಾನ್ವಿ ಸೂದ್ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಬೇಸ್ ಕ್ಯಾಂಪನ್ನು ಏರುವ ಮೂಲಕ ಅತ್ಯಮೋಘ ಸಾಧನೆ ಮಾಡಿದ್ದಾಳೆ. ಈ ಮೂಲಕ ಸಾನ್ವಿ ಸೂದ್ ಈ ಸಾಧನೆ ಮಾಡಿದ ದೇಶದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.

ಪಂಜಾಬಿನ ರೋಪರ್ ನ ನಿವಾಸಿ ದೀಪಕ್ ಎಂಬುವರ ಪುತ್ರಿಯಾಗಿರುವ ಸಾನ್ವಿ ಸೂದ್, ಬೇಸ್ ಕ್ಯಾಂಪ್ ಅನ್ನು ತಲುಪಿ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ದೇಶದ ಮೊದಲ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ.

ಸಾನ್ವಿ ಸೂದ್ 5,364 ಮೀಟರ್ ದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಅನ್ನು ಕೇವಲ 9 ದಿನಗಳಲ್ಲಿ ಹತ್ತಿ ಸಾಧನೆ ಮಾಡಿದ್ದಾಳೆ.‌ ಯಾದವೀಂದ್ರ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಸಾನ್ವಿ ಸೂದ್ ಳ ಸಾಧನೆಗೆ ಪಂಜಾಬ್ ಅಲ್ಲದೇ ದೇಶಾದ್ಯಂತ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏರ್ ಟೆಲ್ ನಿಂದ `ಸ್ಮಾರ್ಟ್ ಮಿಸ್ಡ್ ಕಾಲ್ ಅಲರ್ಟ್ಸ್’ ಸೇವೆ; ಹೀಗಿದೆ ಅದರ ವಿಶೇಷತೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಾನ್ವಿ, ನಾನು ಪರ್ವತವನ್ನು ಏರುವಾಗ ಹಲವಾರು ಸಮಸ್ಯೆಗಳನ್ನು ಎದುರಿಸಿದೆ. ಆದರೆ, ಏರಲೇಬೇಕೆಂಬ ಛಲವಿದ್ದುದರಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದಿದ್ದಾಳೆ.

ಎವರೆಸ್ಟ್ ಸಿನೆಮಾವನ್ನು ನೋಡಿ ಪ್ರೇರೇಪಣೆಗೊಂಡ ಸಾನ್ವಿ, ಚಳಿ ಮತ್ತು ದುರ್ಗಮ ಪ್ರದೇಶವನ್ನು ಹತ್ತಿದ್ದಾಳೆ. ಆಕೆ 9 ದಿನಗಳಲ್ಲಿ 65 ಕಿಲೋಮೀಟರ್ ಉದ್ದದ ಶಿಖರವನ್ನು ಏರಿದ್ದಾಳೆ. ಆಕೆಗಿನ್ನೂ ಏಳು ವರ್ಷವಾಗಿದ್ದರಿಂದ ಬೇಸ್ ಕ್ಯಾಂಪಿಗಿಂತ ಮೇಲೆ ಏರಲು ಅವಕಾಶವಿರಲಿಲ್ಲ. ಆದಾಗ್ಯೂ, ನಮ್ಮ ಮಗಳು ಈ ಸಾಧನೆ ಮಾಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ ಎಂದು ದೀಪಕ್ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...