ಟೆರೆಸ್ ಮೇಲೆ ನಿಂತು ವರದಿ ಮಾಡುವ ಮೂಲಕ ಸಿಎಂ ಗಮನ ಸೆಳೆದ 7ರ ಪೋರ…..! 11-08-2021 2:19PM IST / No Comments / Posted In: Corona, Corona Virus News, Latest News, India, Live News ಮಣಿಪುರದಲ್ಲಿ ವೈದ್ಯಕೀಯ ಆಮ್ಲಜನಕ ಮೂಲ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸಿಎಂ ಎನ್.ಬಿರೇನ್ ಸಿಂಗ್ ಆಮ್ಲಜನಕ ಘಟಕವನ್ನು ಸೋಮವಾರ ಲೋಕಾರ್ಪಣೆಗೊಳಿಸಿದ್ರು. ಚಾಂಡೇಲ್, ಉಖ್ರುಲ್ ಹಾಗೂ ಸೇನಾಪತಿ ಎಂಬ ಮೂರು ಜಿಲ್ಲೆಗಳಲ್ಲಿ ಆಮ್ಲಜನಕ ಘಟಕಗಳನ್ನು ಉದ್ಘಾಟನೆ ಮಾಡಲಾಗಿದೆ. ಚಾಂಡೇಲ್ ಜಿಲ್ಲಾಸ್ಪತ್ರೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಿರೇನ್ ಸಿಂಗ್, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಸರ್ಕಾರವು ಜನರ ಜೀವವನ್ನು ಉಳಿಸಲು ಸಾಕಷ್ಟು ಶ್ರಮಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಮ್ಲಜನಕ ಘಟಕವನ್ನು ಸ್ಥಾಪನೆ ಮಾಡೋದಾಗಿ ಹೇಳಿದ್ರು. DRDO ನೇಮಕಾತಿ: 10 ನೇ ತರಗತಿ ವಿದ್ಯಾರ್ಹತೆ ಹೊಂದಿದವರಿಂದ ಅರ್ಜಿ ಆಹ್ವಾನ ಅಂದಹಾಗೆ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯಿಂದ ಸಿಎಂ ಬಿರೇನ್ ಸಿಂಗ್ ಪ್ರಚಲಿತವಾದ್ದಕ್ಕಿಂತ ಜಾಸ್ತಿ ಮನೆಯ ಟೆರೆಸ್ ಮೇಲೆ ನಿಂತು ಬಾಲಕನೊಬ್ಬ ಮಾಡಿದ ಉದ್ಘಾಟನಾ ಕಾರ್ಯಕ್ರಮದ ವರದಿಯ ಮೂಲಕ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ವೈರಲ್ ಆಗಿದೆ. ಹೆಲಿಕಾಪ್ಟರ್ನಲ್ಲಿ ಸಿಎಂ ಬಿರೇನ್ ಸಿಂಗ್ ಬಂದಿಳಿಯಲಿದ್ದಾರೆ ಎಂಬ ವಿಚಾರವಾಗಿಯೇ ಉತ್ಸುಕನಾಗಿದ್ದ 7 ವರ್ಷದ ಬಾಲಕ ಆಮ್ಲಜನಕ ಘಟಕಗಳು ಹೇಗೆ ಮನುಷ್ಯನಿಗೆ ಉಪಕಾರಿ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾನೆ. ಮಾತ್ರವಲ್ಲದೇ ಸಿಎಂಗೂ ಧನ್ಯವಾದ ಅರ್ಪಿಸಿದ್ದಾನೆ. ಬಾಲಕನ ಈ ಪ್ರಯತ್ನಕ್ಕೆ ಮೆಚ್ಚುಗೆ ಸೂಚಿಸಿದ ಬಿರೇನ್ ಸಿಂಗ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿದ್ದಾರೆ. ಬಾಲಕನ ಈ ವರದಿಯು ನೆಟ್ಟಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. Meet my young friend from Senapati who was reporting my visit to the district yesterday to inaugurate the PSA Oxygen plant at Senapati District Hospital.@narendramodi pic.twitter.com/agk5zch4A3 — N.Biren Singh (Modi Ka Parivar) (@NBirenSingh) August 10, 2021