ಮಕ್ಕಳು ಎಲ್ಲಾ ವಿಚಾರದಲ್ಲೂ ನಮಗಿಂತ ಭಾರೀ ಮುಂದಿದ್ದು, ಆಯ್ಕೆಗಳ ವಿಚಾರದಲ್ಲಿ ಅದೆಷ್ಟು ಸ್ಪಷ್ಟತೆ ಹೊಂದಿದ್ದಾರೆ ಎಂಬುದನ್ನು ನಾವು ನೋಡುತ್ತಲೇ ಬಂದಿದ್ದೇವೆ.
ಏಳು ವರ್ಷದ ಬಾಲಕನೊಬ್ಬ ತನ್ನ ಗಿಟಾರ್ ಕೌಶಲ್ಯದಿಂದ ಆನ್ಲೈನ್‌ನಲ್ಲಿ ಸಂಚಲನ ಸೃಷ್ಟಿಸಿದ್ದಾನೆ. ’ಗನ್ಸ್ ಅಂಡ್ ರೋಸಸ್’ನ ’ಸ್ವೀಟ್ ಚೈಲ್ಡ್ ಓ ಮೈನ್’ ಹಾಡಿನ ಟ್ಯೂನ್ ಅನ್ನು ಗಿಟಾರ್‌ನಲ್ಲಿ ನುಡಿಸುವ ಮೂಲಕ ಈ ಬಾಲಕ ಸದ್ದು ಮಾಡಿದ್ದಾನೆ.
ಲಿಯೊನಾರ್ಡೋ ಹೆಸರಿನ ಈ ಬಾಲಕ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತನ್ನ ಈ ಗಿಟಾರ್ ವಾದನವನ್ನು ಶೇರ್ ಮಾಡಿಕೊಂಡಿದ್ದಾನೆ. ಈ ವಿಡಿಯೋಗೆ ಒಂಬತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಸಂದಾಯವಾಗಿವೆ.
https://youtu.be/EW9XobzMulk