ಕುತ್ತಿಗೆ ಸ್ನಾಯುವಿಗೆ ಟ್ಯೂಮರ್ ಆಗಿದ್ದ ಕಾರಣದಿಂದ ಕತ್ತನ್ನು ಅಲುಗಾಡಿಸಲು ಆಗದೇ ಕಷ್ಟ ಪಡುತ್ತಿದ್ದ ಸೌಮ್ಯ ತಿವಾರಿ ಎಂಬ ಏಳು ವರ್ಷದ ಬಾಲಕಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊಸ ಜೀವನ ಕೊಟ್ಟಿದ್ದಾರೆ.
’ಟಾರ್ಟಿಕಾಲಿಸ್’ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಸೌಮ್ಯಗೆ, ಆಕೆಯ ಕತ್ತು 90 ಡಿಗ್ರೀ ಕೋನದಲ್ಲಿ ಫಿಕ್ಸ್ ಆಗಿದ್ದು, ಅಲುಗಾಡಿಸಲು ಆಗುತ್ತಿರಲಿಲ್ಲ. ಇದನ್ನು ಸರಿ ಪಡಿಸುವ ಯತ್ನದಲ್ಲಿ ಎರಡು ಶಸ್ತ್ರಚಿಕಿತ್ಸೆಗಳು ವಿಫಲಗೊಂಡ ಬಳಿಕ ಇದೀಗ ನವಿ ಮುಂಬಯಿಯ ಅಪೋಲೋ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಶೀಘ್ರ ಪತನ: ಸಿದ್ದರಾಮಯ್ಯ
ಈ ರೀತಿಯ ಕೇಸ್ ಈ ಹಿಂದೆ ಆರ್ಥೋಪೆಡಿಕ್/ವೈದ್ಯಕೀಯ ಜರ್ನಲ್/ಸಾಹಿತ್ಯದಲ್ಲಿ ಉಲ್ಲೇಖವಾಗದೇ ಇದ್ದ ಕಾರಣದಿಂದ ಬಾಲಕಿಗೆ ಚಿಕಿತ್ಸೆ ನೀಡುವುದು ಭಾರೀ ಸವಾಲೇ ಆಗಿತ್ತು. ಆದರೂ ಸಹ ಈ ಸವಾಲನ್ನು ತೆಗೆದುಕೊಂಡ ಬಹು ತಜ್ಞರ ತಂಡವೊಂದು ಬಹಳ ಕ್ಲಿಷ್ಠಕರವಾದ ಬಹು-ಹಂತದ ಸರ್ಜರಿಯನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಸೌಮ್ಯ ಈಗ ಎಲ್ಲ ಮಕ್ಕಳಂತೆ ತನ್ನ ಕತ್ತು ಹಾಗೂ ತಲೆಯನ್ನು ತಿರುಗಿಸಬಲ್ಲವಳಾಗಿದ್ದಾಳೆ.