ತನ್ನ ಅಪ್ಪ ಹಾಗೂ ನಾಲ್ಕೂವರೆ ವರ್ಷದ ತಂಗಿಯನ್ನು ಉಳಿಸಿಕೊಳ್ಳಲು ಒಂದು ಗಂಟೆಗೂ ಹೆಚ್ಚು ಕಾಲ ಈಜಿದ ಏಲು ವರ್ಷದ ಬಾಲಕನೊಬ್ಬನನ್ನು ರಿಯಲ್ ಹೀರೋ ಎಂದು ನೆಟ್ಟಿಗರು ಕೊಂಡಾಡಿದ್ದಾರೆ.
ಫ್ಲಾರಿಡಾದ ಮಂದರಿನ್ ಪಾಯಿಂಟ್ ಬಳಿಯ ಸೇಂಟ್ ಜಾನ್ಸ್ ನದಿಯಲ್ಲಿ ತಾನು ಹಾಗೂ ತನ್ನ ಅಪ್ಪನನ್ನು ಪ್ರತ್ಯೇಕಿಸಿದ್ದ ನೀರಿನ ಅಲೆಯೊಂದನ್ನೇ ಮೆಟ್ಟಿ ಈಜಿದ ಚೇಸ್ ಹೆಸರಿನ ಈ ಬಾಲಕ, ಅಪ್ಪ-ತಂಗಿ ಇಬ್ಬರನ್ನೂ ರಕ್ಷಿಸಿಕೊಂಡಿದ್ದಾನೆ.
ನದಿಯಲ್ಲಿ ದೋಣಿಯೊಂದರ ಮೇಲೆ ಕುಳಿತಿದ್ದ ತಂದೆ ಸ್ಟೀವನ್ ಸುತ್ತಲೂ ಈಜುತ್ತಿದ್ದ ಮಕ್ಕಳ ಮೇಲೆ ನಿಗಾ ಇಟ್ಟಿದ್ದರು. ಆ ವೇಳೆ ಜೋರಾದ ಅಲೆಯ ಪ್ರವಾಹವೊಂದರ ಕಾರಣ ದೋಣಿಯ ಕೈಬಿಟ್ಟ ಚೇಸ್ ತಂಗಿ ಅಬಿಗೇಲ್ ಜೊತೆಗೆ ಆಕೆಯ ಅಣ್ಣ ಅಪಾಯಕ್ಕೆ ಸಿಲುಕಿದ್ದಾರೆ. ಇಬ್ಬರನ್ನೂ ರಕ್ಷಿಸಲು ತಂದೆ ಸ್ಟೀವ್ ನೀರಿಗೆ ಧುಮುಕಿದ್ದು ಆ ವೇಳೆ ಅವರು ಜೀವರಕ್ಷಕ ಜಾಕೆಟ್ ಧರಿಸಿರಲಿಲ್ಲ.
ನೀರಿನ ಪ್ರಬಲ ಅಲೆಗಳ ಮುಂದೆ ಸ್ಟೀವ್ ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ಹಾಕಿದ ಶ್ರಮವೆಲ್ಲಾ ವ್ಯರ್ಥವಾಗಿ ಅವರ ರಟ್ಟೆಗಳು ಸೋತುಬಿಟ್ಟಿವೆ. ಇದೇ ವೇಳೆ ಈಜುವುದನ್ನು ಮುಂದುವರೆಸಿದ ಚೇಸ್, ತನಗೆ ದಣಿವು ತಂದುಕೊಳ್ಳದೇ ಇರುವ ರೀತಿಯಲ್ಲಿ ಮುಂದುವರೆದಿದ್ದಾನೆ. ಒಂದು ಗಂಟೆಯಷ್ಟು ಹೊತ್ತು ಈಜಿದ ಬಳಿಕ ದಡ ಸೇರಿದ ಚೇಸ್, ನೆರವಿಗೆ ಯಾಚಿಸಿ ಕೂಗಿಕೊಂಡಿದ್ದಾನೆ.
ಇಲ್ಲಿನ ಜಾಕ್ಸನ್‌ವಿಲ್ಲ ಅಗ್ನಿ ಹಾಗೂ ರಕ್ಷಣಾ ಇಲಾಖೆ ಹಾಗೂ ಕೌಂಟಿ ಶರೀಫ್ ಕಚೇರಿ ಹಾಗೂ ಫ್ಲಾರಿಡಾ ಮೀನು ಹಾಗೂ ವನ್ಯಜೀವ ಸಂರಕ್ಷಣಾ ಸಮಿತಿಯ ಸಿಬ್ಬಂದಿ ಸ್ಟೀವನ್ ಹಾಗೂ ಅಬಿಗೇಲ್‌ರನ್ನು ಕಂಡುಕೊಂಡು ಇಬ್ಬರನ್ನೂ ರಕ್ಷಿಸಿದ್ದಾರೆ.