alex Certify ಸಂಪುಟಕ್ಕೆ ಸೇರಿದ ಶೋಭಾ ಕರಂದ್ಲಾಜೆ ಸೇರಿ 7 ಮಹಿಳಾ ಸಂಸದರ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಪುಟಕ್ಕೆ ಸೇರಿದ ಶೋಭಾ ಕರಂದ್ಲಾಜೆ ಸೇರಿ 7 ಮಹಿಳಾ ಸಂಸದರ ಬಗ್ಗೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ನವದೆಹಲಿ: ಪ್ರಧಾನಿ ಮೋದಿ ಸಂಪುಟ ಪುನಾರಚನೆ ಸಂದರ್ಭದಲ್ಲಿ 7 ಮಂದಿ ಮಹಿಳಾ ಸಂಸದರಿಗೆ ಸಚಿವ ಸ್ಥಾನ ನೀಡಲಾಗಿದೆ.

ಅನುಪ್ರಿಯಾ ಪಟೇಲ್, ಮೀನಾಕ್ಷಿ ಲೇಖಿ, ಶೋಭಾ ಕರಂದ್ಲಾಜೆ ಸೇರಿದಂತೆ 7 ಮಂದಿ ಮಹಿಳಾ ಸಂಸದರು ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಿದ್ದಾರೆ.

2019 ರಲ್ಲಿ ಮೋದಿ ಕ್ಯಾಬಿನೆಟ್ ಪ್ರಮಾಣವಚನ ಸ್ವೀಕರಿಸಿದ ಕೇವಲ ಮೂವರು ಕ್ಯಾಬಿನೆಟ್ ಮಹಿಳಾ ಮಂತ್ರಿಗಳು ಮತ್ತು ಮೂರು ರಾಜ್ಯ ಸಚಿವರು ಹೊಂದಿದ್ದ ಮಹಿಳೆಯರ ಪ್ರಾತಿನಿಧ್ಯವನ್ನು ಟೀಕಿಸಲಾಗಿತತ್ಉ.

ಹರ್ ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿದ್ದರಿಂದ ಕ್ಯಾಬಿನೆಟ್ ಮಂತ್ರಿಗಳ ಸಂಖ್ಯೆ ಎರಡಕ್ಕೆ ಇಳಿದಿದೆ. ನಿರ್ಮಲಾ ಸೀತಾರಾಮನ್ ಮತ್ತು ಸ್ಮೃತಿ ಇರಾನಿ ಕ್ಯಾಬಿನೆಟ್ ಮಂತ್ರಿಗಳಾಗಿದ್ದು, ನಿರಂಜನ ಜ್ಯೋತಿ, ರೇಣುಕಾ ಸಿಂಗ್, ದೇಬಶ್ರೀ ಚೌಧರಿ ರಾಜ್ಯ ಸಚಿವರಾಗಿದ್ದು, ಅವರಲ್ಲಿ ದೇಬಶ್ರೀ ಚೌಧರಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಇವರೊಂದಿಗೆ ಬುಧವಾರ ಪ್ರಮಾಣವಚನ ಸ್ವೀಕರಿಸಿದ 7 ಸಂಸದರು ರಾಜ್ಯ ಸಚಿವರ ಸ್ಥಾನ ಪಡೆದುಕೊಂಡಿದ್ದಾರೆ.

ಅನುಪ್ರಿಯಾ ಪಟೇಲ್

ಉತ್ತರಪ್ರದೇಶದ ಮಿರ್ಜಾಪುರ ಲೋಕಸಭೆ ಕ್ಷೇತ್ರದ ಸಂಸದರಾದ ಅನುಪ್ರಿಯಾ ಪಟೇಲ್ ಸಂಸದರಾಗಿ ಎರಡನೇ ಬಾರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಆರೋಗ್ಯ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು. ಎಂಬಿಎ ಪದವೀಧರರಾಗಿರುವ ಅನುಪ್ರಿಯಾ ಸಿಂಗ್ ರಾಜಕೀಯಕ್ಕೆ ಬರುವ ಮೊದಲು ಆಮಿಟಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ.

ಶೋಭಾ ಕರಂದ್ಲಾಜೆ

ಕರ್ನಾಟಕದ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಸದಸ್ಯೆ ಶೋಭಾ ಕರಂದ್ಲಾಜೆ ಎರಡನೇ ಬಾರಿಗೆ ಸಂಸದರಾಗಿದ್ದು ಕರ್ನಾಟಕದಲ್ಲಿ ಒಂದು ಬಾರಿ ವಿಧಾನಸಭೆ, ಒಂದು ಬಾರಿ ವಿಧಾನಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಆಹಾರ ನಾಗರಿಕ ಸರಬರಾಜು, ಇಂಧನ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಖಾತೆಗಳನ್ನು ಅವರು ನಿರ್ವಹಿಸಿದ್ದಾರೆ. ಮಂಗಳೂರಿಂದ ಸಮಾಜಶಾಸ್ತ್ರದಲ್ಲಿ ಎಂಎ ಪದವಿ ಪಡೆದುಕೊಂಡಿದ್ದಾರೆ.

ದರ್ಶನಾ ವಿಕ್ರಮ್ ಜರ್ದೋಷ್

ದರ್ಶನಾ ವಿಕ್ರಮ್ ಜರ್ದೋಷ್ ಅವರು ಸೂರತ್ ನಿಂದ ಮೂರನೇ ಬಾರಿಗೆ ಸಂಸದರಾಗಿದ್ದಾರೆ. ಸೂರತ್ ಮುನ್ಸಿಪಲ್ ಕಾರ್ಪೋರೇಷನ್ ನ ಕಾರ್ಪೊರೇಟರ್ ಮತ್ತು ಗುಜರಾತ್ ಸಮಾಜ ಕಲ್ಯಾಣ ಮಂಡಳಿ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಸೂರತ್‌ನ ಕೆ ಪಿ ಕಾಮರ್ಸ್ ಕಾಲೇಜಿನಿಂದ ಬಿಕಾಂ ಪದವಿ ಗಳಿಸಿದ್ದಾರೆ.

ಮೀನಾಕ್ಷಿ ಲೇಖಿ

ಮೀನಾಕ್ಷಿ ಲೇಖಿ ದೆಹಲಿಯ ಪ್ರಮುಖ ಬಿಜೆಪಿ ನಾಯಕಿಯಾಗಿದ್ದು, ಸುಪ್ರಿಂಕೋರ್ಟ್ ವಕೀಲರೂ ಆಗಿದ್ದಾರೆ. ಎರಡನೇ ಬಾರಿಗೆ ಸಂಸದರಾಗಿರುವ ಮೀನಾಕ್ಷಿ ಲೇಖಿ ದೆಹಲಿ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದರು. ದೆಹಲಿಯ ವಿವಿಯಿಂದ ಎಲ್.ಎಲ್.ಬಿ. ಪದವಿ ಪಡೆದುಕೊಂಡಿದ್ದಾರೆ.

ಅನ್ನಪೂರ್ಣ ದೇವಿ

ಅನ್ನಪೂರ್ಣ ದೇವಿ ಅವರು 30 ವರ್ಷದವರಾಗಿದ್ದಾಗಲೇ ಬಿಹಾರದ ಗಣಿ ಇಲಾಖೆ ಸಚಿವರಾಗಿದ್ದರು. ಜಾರ್ಖಂಡ್ ಕೊಡರ್ಮಾ ಲೋಕಸಭೆ ಸಂಸದರಾಗಿರುವ ಅನ್ನಪೂರ್ಣದೇವಿ ಬಿಹಾರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದಾರೆ. ನೀರಾವರಿ, ಮಹಿಳಾ ಕಲ್ಯಾಣ ಸೇರಿದಂತೆ ಹಲವು ಖಾತೆಗಳ ಜವಾಬ್ದಾರಿ ನಿರ್ವಹಿಸಿದ್ದಾರೆ. ರಾಂಚಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂಎ ಪದವಿ ಪಡೆದುಕೊಂಡಿದ್ದಾರೆ.

ಪ್ರತಿಮಾ ಭೂಮಿಕ್

ತ್ರಿಪುರಾ ಪಶ್ಚಿಮ ಲೋಕಸಭಾ ಕ್ಷೇತ್ರದ ಸಂಸದರಾಗಿ ಮೊದಲ ಬಾರಿಗೆ ಆಯ್ಕೆಯಾಗಿರುವ ಪ್ರತಿಮಾ ಭೂಮಿಕ್ ಕೃಷಿ ಕುಟುಂಬದಿಂದ ಬಂದವರಾಗಿದ್ದಾರೆ. ತ್ರಿಪುರಾ ಮಹಿಳಾ ವಿಶ್ವವಿದ್ಯಾಲಯದ ಮಹಿಳಾ ಕಾಲೇಜಿನಿಂದ ಜೈವಿಕ ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಡಾ. ಭಾರತಿ ಪ್ರವೀಣ್ ಪವಾರ್

ಮಹಾರಾಷ್ಟ್ರದ ನಾಸಿಕ್ ನ ಭಾರತಿ ಪ್ರವೀಣ್ ಪ್ರವಾರ್ ವೈದ್ಯರಾಗಿದ್ದು, ದಿಂಡೋರಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಮೊದಲ ಬಾರಿಗೆ ಸಚಿವರಾಗಿದ್ದಾರೆ. ಎಂಬಿಬಿಎಸ್ ಪದವಿ ಪಡೆದುಕೊಂಡಿದ್ದು, ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಭಾರತಿ ನಾಸಿಕ್ ಜಿಲ್ಲಾ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...