ವಾಟ್ಸ್ ಅಪ್ ಜೀವನದ ಒಂದು ಭಾಗವಾಗಿದೆ. ವಾಟ್ಸಾಪ್ ಇಲ್ಲದೆ ಒಂದು ಗಂಟೆ ಕಳೆಯೋದು ಕಷ್ಟ ಎನ್ನುವವರಿದ್ದಾರೆ. ವಾಟ್ಸಾಪ್ ನಲ್ಲಿ ಪ್ರತಿ ದಿನ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ವಾಟ್ಸಾಪ್ ಬಳಕೆಗೂ ಮುನ್ನ ವಾಟ್ಸಾಪ್ ನ ಬದಲಾದ ನಿಯಮಗಳ ಬಗ್ಗೆ ತಿಳಿಯುವ ಅವಶ್ಯಕತೆಯಿದೆ. ಒಂದು ವೇಳೆ ವಾಟ್ಸಾಪ್ ನಿಯಮ ಮೀರಿದ್ರೆ ಜೈಲು ಸೇರಬೇಕಾಗುತ್ತದೆ.
ವಾಟ್ಸಾಪ್ ನಲ್ಲಿ ಅಶ್ಲೀಲ ಫೋಟೋ ಅಥವಾ ಅಶ್ಲೀಲ ವಿಡಿಯೋ ಹಂಚಿಕೊಳ್ಳಲು ಹೋಗಬೇಡಿ. ಈ ಬಗ್ಗೆ ಪೊಲೀಸರು ಗಂಭೀರವಾಗಿದ್ದಾರೆ. ಅಶ್ಲೀಲ ವಿಷ್ಯಗಳನ್ನು ಷೇರ್ ಮಾಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಾರೆ. ಬಳಕೆದಾರರನ್ನು ಪೊಲೀಸರು ಬಂಧಿಸಬಹುದು. ಜೊತೆಗೆ ಅವರ ವಾಟ್ಸಾಪ್ ಖಾತೆಯನ್ನು ಶಾಶ್ವತವಾಗಿ ಮುಚ್ಚಬಹುದು.
ವಾಟ್ಸಾಪ್ ಮೇಲೆ ನಿಮಗೆ ಮಾತ್ರ ನಿಯಂತ್ರಣವಿರುವಂತೆ ನೋಡಿಕೊಳ್ಳಿ. ಆಗಾಗ ಸೆಟ್ಟಿಂಗ್ ಹಾಗೂ ಕಾಂಟೆಕ್ಟ್ ಪಟ್ಟಿಯನ್ನು ಪರಿಶೀಲನೆ ನಡೆಸುತ್ತಿರಿ. ವಾಟ್ಸಾಪ್ ಮೂಲಕ ನಿಮಗೆ ಕೆಟ್ಟ ಸಂದೇಶ ಕಳುಹಿಸದಂತೆ ನೋಡಿಕೊಳ್ಳಿ. ನಿಮಗಿಷ್ಟವಿಲ್ಲದ ವ್ಯಕ್ತಿಗಳ ನಂಬರ್ ಬ್ಲಾಕ್ ಮಾಡಿ.
ಪ್ರೊಫೈಲ್ ಫೋಟೋದೊಂದಿಗೆ ಸಂಪೂರ್ಣ ಮಾಹಿತಿಯನ್ನು ನೀಡಬೇಡಿ. ಅನೇಕರು ತಮ್ಮ ಸಂಪೂರ್ಣ ಜಾತಕವನ್ನು ವಾಟ್ಸಾಪ್ ಪ್ರೊಫೈಲ್‌ನಲ್ಲಿ ಹಾಕುವ ಅಭ್ಯಾಸ ಹೊಂದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಹೀಗೆ ಮಾಡಬೇಡಿ. ಹಾಗೆ ಪ್ರೊಫೈಲ್ ಫೋಟೋಕ್ಕೆ ಕುಟುಂಬದ ಎಲ್ಲ ಸದಸ್ಯರ ಫೋಟೋ ಹಾಕಬೇಡಿ. ಸಾಧ್ಯವಾದಷ್ಟು ಪ್ರೊಫೈಲ್ ಫೋಟೋಕ್ಕೆ ಗುಂಪು ಫೋಟೋ ಹಾಕಬೇಡಿ. ಪ್ರೊಫೈಲ್ ಫೋಟೋದ ಗೌಪ್ಯತೆಯನ್ನು ಕಾಪಾಡಿ.
ಅಪ್ಲಿಕೇಶನ್ ಲಾಕ್ ಮಾಡಲು ವಾಟ್ಸಾಪ್ ಫಿಂಗರ್ ಪ್ರಿಂಟ್ ಮತ್ತು ಫೇಸ್ ಐಡಿ ಲಾಕ್ ನೀಡಲಾಗಿದೆ. ಅನೇಕರು ಇದನ್ನು ಬಳಸುವುದಿಲ್ಲ. ಸ್ವಯಂ ಚಾಲಿತ ಲಾಕ್ ಆಯ್ಕೆಯೂ ಇದ್ರಲ್ಲಿದೆ. ಸೆಟ್ಟಿಂಗ್ ನಲ್ಲಿ ಈ ಗೌಪ್ಯತೆ ಆಯ್ಕೆ ಲಭ್ಯವಿದೆ.
ಗ್ರೂಪ್ ಗೆ ಸೇರುವ ಅಂತಿಮ ನಿರ್ಧಾರ ನಿಮ್ಮ ಕೈನಲ್ಲಿದೆ. ಬೇರೆಯವರು ನಿಮ್ಮನ್ನು ಗ್ರೂಪ್ ಗೆ ಸೇರಿಸಲು ಸಾಧ್ಯವಾಗದಂತೆ ನೀವು ವಾಟ್ಸಾಪ್ ಸೆಟ್ಟಿಂಗ್ ಮಾಡಬಹುದು. ಕಂಡ ಕಂಡ ಗ್ರೂಪ್ ನಲ್ಲಿ ನೀವು ಸೇರಿದ್ದರೆ ನಿಮಗೆ ಅಪಾಯ. ಗ್ರೂಪ್ ನಲ್ಲಿ ಆಕ್ಷೇಪಾರ್ಹ ವಿಷ್ಯವನ್ನು ಹಂಚಿಕೊಳ್ಳಲಾಗಿದ್ದು, ಎಲ್ಲರೂ ಗ್ರೂಪ್ ನಿಂದ ಹೊರ ಹೋದರೆ, ಸ್ವಯಂ ಚಾಲಿತವಾಗಿ ನೀವೇ ಗ್ರೂಪ್ ನಿರ್ವಾಹಕರಾಗುತ್ತಿರಿ. ಆಗ ಪೊಲೀಸರು ನಿಮ್ಮ ವಿಚಾರಣೆ ನಡೆಸುತ್ತಾರೆ.
ಹೆಚ್ಚಿನವರ ವಾಟ್ಸಾಪ್, ಆಟೋ ಬ್ಯಾಕಪ್ ನಲ್ಲಿರುತ್ತದೆ. ಆದ್ರೆ ಇದು ತಪ್ಪು. ವಾಟ್ಸಾಪ್ ಕೇವಲ ವಾಟ್ಸಾಪ್ ಜವಾಬ್ದಾರಿಯನ್ನು ಮಾತ್ರ ತೆಗೆದುಕೊಳ್ಳುತ್ತದೆ. ಗೂಗಲ್ ಡ್ರೈವ್ ಅಥವಾ ಬೇರೆ ಯಾವುದೇ ಅಪ್ಲಿಕೇಷನ್ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಬ್ಯಾಕಪ್ ಆಗ್ತಿದ್ದಂತೆ ನಿಮ್ಮ ಚಾಟ್ ಖಾಸಗಿಯಾಗಿ ಉಳಿಯುವುದಿಲ್ಲ.