ಲೈಂಗಿಕ ಕಿರುಕುಳ ಒಳಗೊಂಡ ರ್ಯಾಗಿಂಗ್ ಅನ್ನು ಸೂಚಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ತಮಿಳುನಾಡಿದ ವೆಲ್ಲೂರು ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಏಳು ಹಿರಿಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.
ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ಸಮಗ್ರ ತನಿಖೆಗೆ ಕೋರಿದ್ದು, ಪೊಲೀಸ್ ವಿಚಾರಣೆ ನಡೆಯುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡ್ತಿರುವ 1.52-ನಿಮಿಷದ ವೀಡಿಯೋದಲ್ಲಿ ಹುಲ್ಲುಹಾಸಿನ ಮೇಲೆ ಪುಶ್-ಅಪ್‌ಗಳನ್ನು ಮಾಡುತ್ತಿರುವ ಪುರುಷರ ಮೇಲೆ ನೀರನ್ನು ಸಿಂಪಡಿಸಲಾಗುತ್ತದೆ.
ಕೆಲವು ವಿದ್ಯಾರ್ಥಿಗಳು ಕೊಚ್ಚೆ ಗುಂಡಿಯಲ್ಲಿ ಈಜಲು ಪ್ರಯತ್ನಿಸುತ್ತಾರೆ. ದೃಶ್ಯದಲ್ಲಿ ಇಬ್ಬರು ಪುರುಷರು ಅನುಚಿತವಾಗಿ ತಬ್ಬಿಕೊಳ್ಳುವುದನ್ನು ನೋಡಬಹುದು, ಜೊತೆಗೆ ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಜನನಾಂಗಗಳಿಗೆ ಹೊಡೆಯುವುದು ಮತ್ತು ಸ್ಪರ್ಶಿಸಿದಂತೆ ಕಂಡುಬರುತ್ತೆ.
ವಿಡಿಯೋ ಬೆಳಕಿಗೆ ಬಂದ ಮೇಲೆ ನಾವು ರ್ಯಾಗಿಂಗ್ ಆರೋಪದ ಮೇಲೆ ಏಳು ಹಿರಿಯ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದೇವೆ ಮತ್ತು ಸಂಪೂರ್ಣ ತನಿಖೆಯನ್ನು ಕೋರಿ ಪೊಲೀಸರಿಗೆ ದೂರು ನೀಡಿದ್ದೇವೆ ಎಂದು ಸಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.