ಬರೋಬ್ಬರಿ 7 ಅಡಿ ಉದ್ದದ ಹೆಬ್ಬಾವನ್ನ ಓಡಿಶಾದ ಕಾಲಹಂಡಿ ಜಿಲ್ಲೆಯ ಗೋಲಮುಂಡಾ ಎಂಬಲ್ಲಿ ರಕ್ಷಣೆ ಮಾಡಲಾಗಿದೆ. ಗಂಗಾ ಸಾಗರ ಕೊಳದಲ್ಲಿ ಮೀನಿನ ಬಲೆಯಲ್ಲಿ ಸಿಲುಕಿದ್ದ ಈ ಹೆಬ್ಬಾವನ್ನ ಶನಿವಾರ ರಕ್ಷಣೆ ಮಾಡಲಾಗಿದೆ.
ಶನಿವಾರ ಬೆಳಗ್ಗೆ ಮೀನುಗಳನ್ನ ಹಿಡಿಯುತ್ತಿದ್ದ ವೇಳೆ ಮೀನುಗಾರ ರಾಜ್ಮಲ್ ದೀಪ್ ಎಂಬವರ ಬಲೆಗೆ ಈ ಬೃಹತ್ ಹಾವು ಸಿಲುಕಿಕೊಂಡಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಹೆಬ್ಬಾವನ್ನ ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಹಾವನ್ನ ಸುರಕ್ಷಿತವಾಗಿ ಕಾಡಿಗೆ ಬಿಡಲಾಗಿದೆ.
ಗೋಲಮುಂಡಾದಲ್ಲಿ ಸಿಕ್ಕ ಈ 7 ಅಡಿ ಉದ್ದದ ಹಾವು ಸರಿ ಸುಮಾರು 8 ಕೆಜಿ ತೂಕವನ್ನ ಹೊಂದಿದೆ ಹಾಗೂ ಇದು 6 ತಿಂಗಳು ಪ್ರಾಯದ್ದಾಗಿದೆ. ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳಿದ್ದಾರೆ.