ಬಟ್ಟೆ ವ್ಯಾಪಾರಿಗಳ ಸ್ವರ್ಗ ಎಂದೇ ಖ್ಯಾತವಾದ ನಗರ ‘ಸೂರತ್ ‘ ನಲ್ಲಿ ಆಯೋಜನೆಯಾಗಿದ್ದ ಜನ್ಮದಿನದ ಪಾರ್ಟಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
ಕೊರೊನಾ ಸಾಂಕ್ರಾಮಿಕವಿದೆ, ಜನದಟ್ಟಣೆ ತಡೆಯಿರಿ. ಜತೆಗೆ ಸಮಾರಂಭಗಳಲ್ಲಿ ಹೆಚ್ಚೆಚ್ಚು ಸಂಖ್ಯೆಯಲ್ಲಿ ಜನರು ಸೇರುವ ಮೂಲಕ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ನಿಯಮ ಉಲ್ಲಂಘಿಸದಿರಿ ಎಂದು ಪೊಲೀಸ್ ಆಯುಕ್ತರು ನಿರ್ಬಂಧ ಹೇರಿದ್ದರೂ, ಈ ಪಾರ್ಟಿಯಲ್ಲಿ ಅದು ಯಾವುದೂ ಪಾಲನೆ ಆಗಿಲ್ಲ.
ವಿಡಿಯೋದಲ್ಲಿರುವಂತೆ ನೃತ್ಯಗಾರ್ತಿಯನ್ನು ಕರೆಸಿ, ಅವಳು ಬಳಕಿಸುವ ಸೊಂಟಕ್ಕೆ ತಕ್ಕಂತೆ ಸುತ್ತಲೂ ಸೇರಿರುವ ಜನರು ಕುಪ್ಪಳಿಸುತ್ತಿದ್ದಾರೆ. ಅವಳ ಮೇಲೆ ನೋಟುಗಳನ್ನು ಎಸೆಯುತ್ತಾ ಮಜಾ ಮಾಡುತ್ತಿದ್ದಾರೆ.
ಇದು ರಾತ್ರಿಯೇ ಆಯೋಜನೆಗೊಂಡ ಪಾರ್ಟಿ ಎಂದು ನಿಖರವಾಗಿ ವಿಡಿಯೋದಲ್ಲಿ ಸಾಬೀತಾಗಿದೆ. ಹಾಗಾಗಿ ನೈಟ್ ಕರ್ಫ್ಯೂ ಉಲ್ಲಂಘನೆ ಕೂಡ ಆಗಿದೆ.
ಶಾಲಾ ಮಕ್ಕಳಿಗೆ ಸಿಹಿ ಸುದ್ದಿ: ದಸರಾ ಬಳಿಕ ಬಿಸಿಯೂಟ, 1 – 5 ನೇ ಕ್ಲಾಸ್ ಶುರು
ಸಿಂಧಿವಾಡ ಭಘತ್ಲಾವ್ ಪ್ರದೇಶದಲ್ಲಿ ದೊಡ್ಡ ವೇದಿಕೆ ನಿರ್ಮಿಸಿ ಯುವತಿಯೊಬ್ಬಳ ಪಾರ್ಟಿಯಲ್ಲಿ ನಡೆದ ಮೋಜು ಮಸ್ತಿಯ ವಿಡಿಯೊ ಇದು ಎಂದು ಪತ್ತೆ ಮಾಡಿದ ಪೊಲೀಸರು, ಒಟ್ಟು 7 ಜನರನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾರೆ.
ಪಾರ್ಟಿಯ ರಾತ್ರಿ ಕುಣಿಯುತ್ತಿದ್ದಾಗ ಗಸ್ತು ತಿರುಗುತ್ತಿದ್ದ ಪೊಲೀಸರು ಸ್ಥಳಕ್ಕೆ ಬಂದು ಪ್ರಶ್ನಿಸಿದ್ದಾರೆಯೇ ಇಲ್ಲವೇ ಎಂದು ಕೆಲವು ನೆಟ್ಟಿಗರು ಪ್ರಶ್ನೆ ಕೂಡ ಮಾಡಿದ್ದಾರೆ. ಸುಖಾಸುಮ್ಮನೆ ಪಾರ್ಟಿಯ ಮೋಜು ಮುಗಿದ ಬಳಿಕ ಪೊಲೀಸರು ಯಾರನ್ನೋ ಬಂಧಿಸಿ ನಾಟಕ ಮಾಡುತ್ತಿಲ್ಲವಲ್ಲ ಎಂದು ನೆಟ್ಟಿಗರು ಅನುಮಾನ ಕೂಡ ವ್ಯಕ್ತಪಡಿಸಿದ್ದಾರೆ.
ಅಧಿಕ ತೂಕದಿಂದ ಮುಜುಗರಕ್ಕೀಡಾಗ್ತಿದ್ದೀರಾ….? ಬೊಜ್ಜನ್ನು ಹೀಗೆ ಕಡಿಮೆ ಮಾಡಿ
ದೇಶಾದ್ಯಂತ ನವರಾತ್ರಿ ಸಡಗರಕ್ಕಾಗಿ ಕೋವಿಡ್-19 ನಿರ್ಬಂಧಗಳನ್ನು ಸಡಿಲಿಸಿದ್ದ ಗುಜರಾತ್ ಪೊಲೀಸರು, ಧಾರ್ಮಿಕ ಆಚರಣೆಗೆ ನಿಯಮಿತ ಸಂಖ್ಯೆಯಲ್ಲಿ ಜನರು ಸೇರಲು ಅವಕಾಶ ನೀಡಿದ್ದಾರೆ. ಇದನ್ನೇ ಪಾರ್ಟಿ ಹೆಸರಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗಿದೆ.
https://www.youtube.com/watch?v=cCw6GCDsU5g