ಕಾಬೂಲ್: ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ಏರ್ಪೋರ್ಟ್ ಹೊರಭಾಗದಲ್ಲಿ ಗುಂಡಿನ ದಾಳಿ ನಡೆಸಲಾಗಿದ್ದು 7 ಮಂದಿ ಆಫ್ಘನ್ ಪ್ರಜೆಗಳನ್ನು ಹತ್ಯೆ ಮಾಡಲಾಗಿದೆ.
ತಾಲಿಬಾನ್ ಉಗ್ರರ ಗುಂಡಿನ ದಾಳಿಯಲ್ಲಿ ಆಫ್ಘನ್ ಪ್ರಜೆಗಳು ಮೃತಪಟ್ಟಿರುವುದಾಗಿ ಬ್ರಿಟಿಷ್ ಮಿಲಿಟರಿಯಿಂದ ಮಾಹಿತಿ ನೀಡಲಾಗಿದೆ. ಉಗ್ರರು ಆಫ್ಘನ್ ಪ್ರಜೆಗಳು ದೇಶ ಬಿಡದಂತೆ ತಡೆಯಲು ಮುಂದಾಗಿದ್ದು, ವಿಮಾನ ನಿಲ್ದಾಣದ ಬಳಿ ಸೇರಿದ ಜನರನ್ನು ಚದುರಿಸಲು ಫೈರಿಂಗ್ ಮಾಡಿದ್ದಾರೆ. ಅಲ್ಲದೇ ಅಮೆರಿಕ ಸೇನೆ ವಶದಲ್ಲಿರುವ ಏರ್ಪೋರ್ಟ್ ಕಬಳಿಸಲು ಭಯೋತ್ಪಾದಕರು ಪ್ರಯತ್ನ ನಡೆಸಿದ್ದು, ಏರ್ ಪೋರ್ಟ್ ಮೇಲೆಯೂ ದಾಳಿಗೆ ಮುಂದಾಗಿದ್ದಾರೆ.