alex Certify 7 ದಶಕಗಳ ಬಳಿಕ ಭಾರತದಲ್ಲಿ ಮತ್ತೆ ʼಚೀತಾʼ ನೋಡುವ ಅವಕಾಶ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ದಶಕಗಳ ಬಳಿಕ ಭಾರತದಲ್ಲಿ ಮತ್ತೆ ʼಚೀತಾʼ ನೋಡುವ ಅವಕಾಶ..!

ನವದೆಹಲಿ: ಭಾರತದಲ್ಲಿ ಚೀತಾಗಳು ನಶಿಸಿ ಹೋಗಿ 7 ದಶಕಗಳೇ ಆಗಿದೆ. ಆದರೆ ಇಂದಿನ ಪೀಳಿಗೆಗೆ ಭಾರತದಲ್ಲಿ ಮತ್ತೆ ಚೀತಾ ನೋಡುವ ಅವಕಾಶ ದೊರೆಯುತ್ತಿದೆ. ಭಾರತಕ್ಕೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಎಂಟು ಚೀತಾಗಳು ಭಾರತಕ್ಕೆ ಬಂದಿವೆ. ಖುದ್ದು ನರೇಂದ್ರ ಮೋದಿಯವರೇ ಇವುಗಳನ್ನು ವೆಲ್ ಕಮ್ ಮಾಡಿದ್ದಾರೆ.

ಹೌದು, ನಮೀಬಿಯಾದಿಂದ ಭಾರತಕ್ಕೆ ಈ ವಿಶೇಷ 8 ಚೀತಾಗಳನ್ನು ಕರೆತರಲಾಗಿದೆ. ಮಧ್ಯಪ್ರದೇಶದ ಕುನ್ಹೋ-ಪಾಲ್‌ಪುರ್ ವನ್ಯಜೀವಿ ಸಂರಕ್ಷಣಾ ಕೇಂದ್ರಕ್ಕೆ ಎಂಟು ಚೀತಾಗಳನ್ನು ಬಿಡಲಾಗಿದೆ. ಇನ್ನು 2 ರಿಂದ 6 ವರ್ಷ ವಯಸ್ಸಿನ 3 ಗಂಡು ಚೀತಾಗಳು ಹಾಗೂ 5 ಹೆಣ್ಣು ಚೀತಾಗಳು ಭಾರತಕ್ಕೆ ಬಂದಿವೆ. ಜಂಬೋಜೆಟ್ ವಿಮಾನಕ್ಕೆ ವಿಶೇಷವಾಗಿ ಚೀತಾ ಚಿತ್ರದ ಪೇಂಟಿಂಗ್ ಮಾಡಲಾಗಿತ್ತು.

ಇನ್ನು ಈ ಚೀತಾಗಳನ್ನು ಸುಮಾರು ಒಂದು ತಿಂಗಳ ಕಾಲ ಕ್ವಾರಂಟೈನ್‌ ಮಾಡಲಾಗಿತ್ತು. ಇಲ್ಲಿಗೆ ಕರೆ ತರುವಾಗ ಯಾವುದೇ ಸೋಂಕಿಗೆ ತುತ್ತಾಗದಂತೆ ನೋಡಿಕೊಳ್ಳಲಾಗಿದೆ. ಜೊತೆಗೆ ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...