ಕರ್ನಾಟಕದಲ್ಲಿ ಇಂದು ಒಮಿಕ್ರಾನ್ ಸ್ಪೋಟವಾಗಿದ್ದು ಬರೋಬ್ಬರಿ 185 ಪ್ರಕರಣಗಳು ವರದಿಯಾಗಿದೆ. ಇಂದು ವರದಿಯಾಗಿರೊ ಅಷ್ಟು ಹೊಸ ಪ್ರಕರಣಗಳು ಬೆಂಗಳೂರಿನಲ್ಲಿ ಪತ್ತೆಯಾಗಿವೆ ಎಂದು ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. 185 ಹೊಸ ಪ್ರಕರಣಗಳ ಮೂಲಕ ರಾಜ್ಯದ ಒಟ್ಟು ಒಮಿಕ್ರಾನ್ ಸೋಂಕಿತರ ಸಂಖ್ಯೆ 1.115 ಕ್ಕೆ ಏರಿಕೆಯಾಗಿದೆ.
ಡಿಸೆಂಬರ್ ತಿಂಗಳಲ್ಲಿ ಇಡೀ ದೇಶದಲ್ಲಿ ಕೇವಲ 1200ರಷ್ಟಿದ್ದ ಒಮಿಕ್ರಾನ್ ಪ್ರಕರಣಗಳು ಈ ತಿಂಗಳಾಂತ್ಯಕ್ಕೆ 9672ಕ್ಕೆ ಏರಿಕೆಯಾಗಿವೆ ಎಂದು ಕೆಂದ್ರದ ಅಂಕಿಅಂಶದಲ್ಲಿ ತಿಳಿದುಬಂದಿದೆ. ಅದ್ರಲ್ಲು ಮೆಟ್ರೋಸಿಟಿಗಳಿರುವ ರಾಜ್ಯಗಳಲ್ಲಿ ಒಮಿಕ್ರಾನ್ ಪ್ರಭಾವ ಹೆಚ್ಚಿದೆ ಎಂದು ಕೇಂದ್ರ ಇಂದು ಎಚ್ಚರಿಸಿದೆ. ಇದರ ಜೊತೆಗೆ ಒಮಿಕ್ರಾನ್ ನ ಉಪವಂಶಜ ರೂಪಾಂತರ BA.2 ಭಾರತದಲ್ಲಿ ಹೆಚ್ಚಿನ ಪ್ರಭಾವ ಬೀರಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ