ಅಕ್ಷಯ್ ಕುಮಾರ್ ಅವರ ʼಸಾಮ್ರಾಟ್ ಪೃಥ್ವಿರಾಜ್ʼ ಚಿತ್ರದೊಂದಿಗೆ 2017ರ ವಿಶ್ವ ಸುಂದರಿ ಮಾನುಷಿ ಛಿಲ್ಲರ್ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ನಟಿ, ಸಂಪೂರ್ಣವಾಗಿ ಎಥ್ನಿಕ್ ಫ್ಯಾಶನ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಸುಂದರ ಸೂಟ್‌ಗಳಿಂದ ಹಿಡಿದು ಸೊಗಸಾದ ಸೀರೆಗಳ ತನಕ ಎಲ್ಲ ಮಾದರಿಯ ಉಡುಪುಗಳಲ್ಲೂ ಛಿಲ್ಲರ್ ಮಿಂಚುತ್ತಿದ್ದಾರೆ.
ಅಹಮದಾಬಾದ್‌ನಲ್ಲಿ ಬುಧವಾರ ಚಿತ್ರದ ಪ್ರಚಾರದ ವೇಳೆ ಮಾನುಷಿ ಛಿಲ್ಲರ್ ಧರಿಸಿದ್ದ ಬಿಳಿ ಸೀರೆ ಕಣ್ಮನ ಸೆಳೆಯುವಂತೆ ಇತ್ತು. ಈ ಸೀರೆಯಲ್ಲಿನ ಮನಮೋಹಕ ಫೋಟೋಗಳನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಮಾಜಿ ವಿಶ್ವ ಸುಂದರಿಗಾಗಿ ಸೊಗಸಾದ ಸೀರೆಯನ್ನು ಅತ್ಯಂತ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಿದ್ದು, ಆಕೆ ಆಭರಣಗಳ ಹೊರೆ ಹೊರದೇ ಸರಳವಾಗಿ ಒಂದು ಜೋಡಿ ಸ್ಟೇಟ್‌ಮೆಂಟ್ ಸ್ಟಡ್‌ಗಳ ಜೊತೆಗೆ ಬಿಳಿ ಬಳೆಗಳ ಸೊಗಸಾದ ಹೊಂದಾಣಿಕೆ ಆಭರಣ ಧರಿಸಿದ್ದರು.