alex Certify 69ರ ಹರೆಯದಲ್ಲೂ ವಿಲಾಸಿ ಬದುಕು, ಇಲ್ಲಿದೆ ರಷ್ಯಾ ಅಧ್ಯಕ್ಷ ಪುಟಿನ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

69ರ ಹರೆಯದಲ್ಲೂ ವಿಲಾಸಿ ಬದುಕು, ಇಲ್ಲಿದೆ ರಷ್ಯಾ ಅಧ್ಯಕ್ಷ ಪುಟಿನ್‌ ಬಗ್ಗೆ ಇಂಟ್ರೆಸ್ಟಿಂಗ್‌ ಮಾಹಿತಿ

ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದಿಂದಾಗಿ ಜಗತ್ತಿನಾದ್ಯಂತ ಎಲ್ಲರ ಬಾಯಲ್ಲಿ ನಲಿದಾಡುತ್ತಿರುವುದು ಕೇವಲ ಎರಡೇ ಎರಡು ಹೆಸರುಗಳು. ಒಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರದ್ದು, ಇನ್ನೊಂದು ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್ಸ್ಕಿ ಅವರದ್ದು. ಉಕ್ರೇನ್‌ ನಂಥ ಪುಟ್ಟ ರಾಷ್ಟ್ರವನ್ನು ಧ್ವಂಸ ಮಾಡಲು ಹೊರಟಿರೋ ರಷ್ಯಾ ಅಧ್ಯಕ್ಷ ಪುಟಿನ್‌ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲವಿದೆ.

ಪುಟಿನ್‌ ಫಿಟ್ನೆಸ್‌ ಜೊತೆಗೆ ಫ್ಯಾಷನ್‌ ಪ್ರಿಯನೂ ಹೌದು. ಅವರ ಬಳಿ ಲಕ್ಷಾಂತರ ರೂಪಾಯಿ ಮೌಲ್ಯದ ಜಾಕೆಟ್‌ ಗಳು ಹಾಗೂ ದುಬಾರಿ ವಾಚ್‌ ಗಳಿವೆ. ಪುಟಿನ್‌ ಗೆ ಈಗ 69ರ ಪ್ರಾಯ. ಈ ವಯಸ್ಸಿನಲ್ಲೂ ಕಟ್ಟುಮಸ್ತಾದ ದೇಹ ಹೊಂದಿದ್ದಾರೆ. ಅದಕ್ಕೆ ತಕ್ಕಂತೆ ಸುಂದರವಾದ ಬಟ್ಟೆಗಳನ್ನು ಧರಿಸ್ತಾರೆ. ಪುಟಿನ್‌ ಗೆ ಡಿಸೈನರ್‌ ಬಟ್ಟೆಗಳೆಂದರೆ ಬಹಳ ಪ್ರಿಯವಂತೆ. ಕಳೆದ ವಾರವಷ್ಟೆ ಯುದ್ಧಕ್ಕೆ ಸಂಬಂಧಿಸಿದಂತೆ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಪುಟಿನ್‌, ತಮ್ಮ ದುಬಾರಿ ಜಾಕೆಟ್‌ ಅನ್ನೇ ದಾನ ಮಾಡಿದ್ದಾರೆ. ಈ ಜಾಕೆಟ್‌ ಬೆಲೆ ರಷ್ಯಾದ ಸರಾಸರಿ ಮಾಸಿಕ ವೇತನಕ್ಕಿಂತಲೂ 30 ಪಟ್ಟು ಹೆಚ್ಚು.

ಈ ಜಾಕೆಟ್‌ ಹೆಸರು ಲೋರೋ ಪಿಯಾನಾ. ಬೆಲೆ 10,000 ಪೌಂಡ್‌, ಅಂದ್ರೆ ಸರಿಸುಮಾರು 10 ಲಕ್ಷ ರೂಪಾಯಿಗಿಂತ್ಲೂ ಅಧಿಕ. ಕೇವಲ ಕೋಟ್‌ ಮಾತ್ರವಲ್ಲ, ಇಟಾಲಿಯನ್‌ ಡಿಸೈನರ್‌ ಕಿಟೋನ್‌ ನ ರೋಲ್‌ ನೆಕ್‌ ಜಂಪರ್‌ ಇವರ ಬಳಿ ಇದೆ. ಇದರ ಬೆಲೆ ಸುಮಾರು 2.42 ಲಕ್ಷ ರೂಪಾಯಿ. ಇಷ್ಟೇ ಅಲ್ಲ ಪ್ರತಿದಿನ ಪುಟಿನ್‌ ಧರಿಸೋ ಸೂಟ್‌ ಗಳನ್ನು ಕೂಡ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಅವರು ಧರಿಸೋ ಸೂಟ್‌ ಗಳ ಆರಂಭಿಕ ಬೆಲೆಯೇ 4 ಲಕ್ಷ ರೂಪಾಯಿ.

ಪುಟಿನ್‌ ವಿಶೇಷವಾಗಿ ವಿನ್ಯಾಸ ಮಾಡಿದ ಕಪ್ಪನೆಯ ಸೂಟ್‌ ಮತ್ತು ಟೈ ಧರಿಸಲು ಇಷ್ಟಪಡ್ತಾರೆ. ಹಾಗಾಗಿಯೇ ಅವರನ್ನು ಮೆನ್‌ ಇನ್‌ ಬ್ಲಾಕ್‌ ಅಂತಾನೂ ಕರೆಯಲಾಗುತ್ತದೆ. ಬಾಂಡ್‌ ಗೆ ಬಟ್ಟೆಗಳನ್ನು ಡಿಸೈನ್‌ ಮಾಡಿರುವ ಇಟಾಲಿಯನ್‌ ವಿನ್ಯಾಸಕರಾದ ಬ್ರಿಯೋನಿ, ಪುಟಿನ್‌ ಗೆ ಅಚ್ಚುಮೆಚ್ಚು. ಸಾಲ್ವಟೊರ್‌ ಫೆರ್ರಾಗಮೊ ಅಥವಾ ಜಾನ್‌ ಲೋಬ್‌ ಬ್ರ್ಯಾಂಡ್‌ ನ ಶೂಗಳನ್ನೇ ಪುಟಿನ್‌ ಧರಿಸ್ತಾರೆ, ಆದ್ರೆ ಜನರ ಗಮನ ಅದರೆಡೆ ಹೋಗಬಾರದೆಂದು ಬ್ರ್ಯಾಂಡ್‌ ಲೇಬಲ್‌ ಗಳನ್ನು ಕಿತ್ತು ಹಾಕಲಾಗುತ್ತದೆ.

ದುಬಾರಿ ಬಟ್ಟೆ ಮಾತ್ರವಲ್ಲ ರಷ್ಯಾದ ನಾಯಕ ಐಷಾರಾಮಿ ವಾಚುಗಳ ಪ್ರಿಯನೂ ಹೌದು. ಅವರ ಬಳಿ ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ ವಾಚುಗಳ ಸಂಗ್ರಹವಿದೆ. ಅವರ ಬಳಿಯಿರುವ ಅತ್ಯಂತ ವಿಶೇಷ ವಾಚ್ ‘ಟೂರ್ಬೋಗ್ರಾಫ್’. ಇದರ ಬೆಲೆ 3 ಕೋಟಿ ರೂಪಾಯಿಗಳಿಗಿಂತ ಹೆಚ್ಚು. ಇದರ ಪಟ್ಟಿಯನ್ನು ಮೊಸಳೆ ಚರ್ಮದಿಂದ ಮಾಡಲಾಗಿದ್ದು, ಚಿನ್ನದ ಕುಸುರಿಯೂ ಇದರಲ್ಲಿದೆ.

ಪುಟಿನ್ ಬಳಿಯಿರೋ ಈ ದುಬಾರಿ ವಸ್ತುಗಳ ಮೌಲ್ಯ ಅವರ ಅಧಿಕೃತ ಸಂಬಳಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಅನ್ನೋ ಆರೋಪ ಕೂಡ ಇದೆ. ಆದ್ರೆ ತಮ್ಮ ದುಬಾರಿ ವಾಚ್‌ ಗಳನ್ನು ಪುಟಿನ್‌ ದಾನ ಕೂಡ ಮಾಡಿದ್ದಾರೆ. ಪುಟಿನ್‌ ಅಧಿಕೃತ ಕಾರ್ಯಕ್ರಮಗಳಲ್ಲಿ ಮಾತ್ರ ಇಂತಹ ದುಬಾರಿ ವಸ್ತುಗಳನ್ನು ಧರಿಸುವುದಿಲ್ಲ. ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗಲೂ ಅವರು ದುಬಾರಿ ಬಟ್ಟೆಗಳನ್ನು ಧರಿಸುತ್ತಾರೆ. ಒಮ್ಮೆ ಅವರು 2.40 ಲಕ್ಷಕ್ಕೂ ಅಧಿಕ ಮೌಲ್ಯದ ‘ಲೋರೋ ಪಿಯಾನಾ’ ಟ್ರ್ಯಾಕ್‌ಸೂಟ್‌ನಲ್ಲಿ ಪೋಸ್ ನೀಡಿದ್ದರು.

ವಿಶೇಷ ರೇಷ್ಮೆಯಿಂದ ಮಾಡಿರೋ ಟ್ರ್ಯಾಕ್‌ ಸೂಟ್‌ ಇದಾಗಿದೆ.  ಪುಟಿನ್‌ ಬಳಿಯಿರೋ ಇತರ ಆಸ್ತಿ ವಿವರಗಳು ಕೂಡ ಅಚ್ಚರಿ ಮೂಡಿಸುತ್ತವೆ. 58 ವಿಮಾನಗಳು, ಹೆಲಿಕಾಪ್ಟರ್‌, ಸೂಪರ್‌ ಯಾಚ್‌ ಗಳನ್ನು ಅವರು ಹೊಂದಿದ್ದಾರೆ. ಪುಟಿನ್‌ ಪ್ಯಾಲೇಸ್‌ ಮೌಲ್ಯವಂತೂ 1 ಬಿಲಿಯನ್‌ ಡಾಲರ್‌ ಅಂತಾ ಅಂದಾಜಿಸಲಾಗುತ್ತದೆ. ರಷ್ಯಾದ ನಾಯಕ ವಿಲಕ್ಷಣ ಸಾಕುಪ್ರಾಣಿಗಳ ಒಡೆಯನೂ ಹೌದು. ಅದರಲ್ಲಿ ‘ಬೋರಿಸ್’ ಎಂಬ ಹುಲಿಯೂ ಸೇರಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...