ವಯಸ್ಸಾದ ಮಹಿಳೆಯೊಬ್ಬರು ಪಾಪಡ್ ಮಾರಾಟ ಮಾಡುತ್ತಿರುವ ಹೃದಯ ವಿದ್ರಾವಕ ವಿಡಿಯೊ ಇನ್ ಸ್ಟಾದಲ್ಲಿ ವೈರಲ್ ಆಗಿದೆ.
ಸ್ಟ್ರೀಟ್ ಫುಡ್ ರೆಸಿಪಿಸ್ ಹೆಸರಿನ ಫುಡ್ ಬ್ಲಾಗಿಂಗ್ ಚಾನೆಲ್ ಹಂಚಿಕೊಂಡಿರುವ ಈ ವಿಡಿಯೋವನ್ನು ಜೈಪುರದಲ್ಲಿ ಚಿತ್ರೀಕರಿಸಲಾಗಿದೆ.
ತನ್ನ ದೈನಂದಿನ ಜೀವನ ನಿರ್ವಹಣೆಗಾಗಿ ಬೀದಿ ಬದಿ ವ್ಯಾಪಾರ ಮಾಡುವ ಈ ಸ್ಪೂರ್ತಿದಾಯಕ ಮಹಿಳೆಯ ಹೋರಾಟ ನೆಟ್ಟಿಗರಲ್ಲಿ ಆಶ್ಚರ್ಯ ತಂದಿದೆ.
ಮಹಿಳೆ ತನ್ನ ತಲೆಯ ಮೇಲೆ ಪಾಪಡ್ ತುಂಬಿದ ದೊಡ್ಡ ಬುಟ್ಟಿಯನ್ನು ಹೊತ್ತುಕೊಂಡು ಹೋಗುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಆಕೆ ತನ್ನ ಸ್ಥಳಕ್ಕೆ ಆಗಮಿಸಿ, ಸಣ್ಣ ಅಂಗಡಿಯನ್ನು ಸ್ಥಾಪಿಸುತ್ತಾಳೆ.
ವಿಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿಗೆ ಸಹ ಸ್ವಲ್ಪ ಪಾಪಡ್ ಅನ್ನು ನೀಡುತ್ತಾಳೆ.
“68 ವರ್ಷದ ಅಮ್ಮ ತನ್ನ ಕುಟುಂಬದ ಜೀವನೋಪಾಯಕ್ಕಾಗಿ ಶ್ರಮಿಸುತ್ತಿದ್ದಾರೆ. ಆಕೆಯ ಕುಟುಂಬದ ಏಕೈಕ ಕೆಲಸ ಮಾಡುವ ಸದಸ್ಯೆ. 20 ರೂಪಾಯಿ ಬೆಲೆ ಬಾಳುವ ಹಪ್ಪಳ ಮಾರಾಟ ಮಾಡುತ್ತಿದ್ದು, ಬೆಳಗ್ಗೆಯಿಂದ ಸಂಜೆಯವರೆಗೆ ಬಿಸಿಲಿನಲ್ಲಿ ಎಲ್ಲ ಪಾಪಡ್ ಮಾರಾಟವಾಗುವವರೆಗೂ ಕಾಯುತ್ತಾಳೆ” ಎಂದು ಶೀರ್ಷಿಕೆ ನೀಡಲಾಗಿದೆ.
ಈ ಕ್ಲಿಪ್ ಕಂಡ ನೆಟ್ಟಿಗರು ತನ್ನ ಕುಟುಂಬವನ್ನು ಪೋಷಿಸಲು ಮಹಿಳೆಯ ಪ್ರಯತ್ನವನ್ನು ಶ್ಲಾಘಿಸಿದರೆ, ಅನೇಕರು ಸಹಾಯ ಹಸ್ತ ಚಾಚಲು ಮುಂದೆ ಬಂದಿದ್ದಾರೆ.