ನವದೆಹಲಿ: ದೇಶದ ಆರು ವರ್ಷಕ್ಕಿಂತ ಮೇಲ್ಪಟ್ಟ ಮೂರನೇ ಎರಡರಷ್ಟು ಜನಸಂಖ್ಯೆ SARS-CoV-2 ಪ್ರತಿಕಾಯ ಹೊಂದಿದೆ ಎಂದು ಗೊತ್ತಾಗಿದೆ. ಇದೇ ವೇಳೆ 40 ಕೋಟಿ ಜನರು ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೊರೋನಾ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಇದು ತೃಪ್ತಿದಾಯಕ ಬೆಳವಣಿಗೆಯಾಗಿದೆ. ಐಸಿಎಂಆರ್ ನ 4 ನೇ ರಾಷ್ಟ್ರೀಯ ಕೋವಿಡ್ ಸಿರೊ ಸಮೀಕ್ಷೆಯ ಆವಿಷ್ಕಾರಗಳು ಭರವಸೆಯ ಕಿರಣ ಮೂಡಿಸಿವೆ ಎಂದು ತೋರಿಸಿದ್ದರೂ, ತೃಪ್ತಿ ಪಡುವಂತೇನೂ ಇಲ್ಲ. ಕೋವಿಡ್ ಮಾರ್ಗಸೂಚಿ ಅನುಸರಿಸಬೇಕಾಗಿದೆ ಎಂದು ಸರ್ಕಾರ ಹೇಳಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಜೂನ್-ಜುಲೈನಲ್ಲಿ ಸಮೀಕ್ಷೆ ನಡೆಸಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ಮಾಹಿತಿ ನೀಡಿದ್ದಾರೆ. 6 ವರ್ಷಕ್ಕಿಂತ ಮೇಲ್ಪಟ್ಟ ಭಾರತದ ಜನಸಂಖ್ಯೆಯ ಮೂರನೇ ಎರಡರಷ್ಟು ಅಥವಾ ಶೇಕಡಾ 67.6 ರಷ್ಟು ಜನರು SARS-CoV-2 ಪ್ರತಿಕಾಯಗಳನ್ನು ಹೊಂದಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಶೇಕಡ 67.6 ರಷ್ಟು ಭಾರತೀಯರು ಕೋವಿಡ್ ಪ್ರತಿಕಾಯಗಳನ್ನು ಹೊಂದಿದ್ದಾರೆ, ಇನ್ನೂ 40 ಕೋಟಿ ಸೋಂಕಿಗೆ ಗುರಿಯಾಗುತ್ತಾರೆ. COVID-19- ಗಮನದಲ್ಲಿಟ್ಟುಕೊಂಡು, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಭೆಗಳನ್ನು ನಿರ್ಬಂಧಿಸಬೇಕು. ಅನಿವಾರ್ಯವಲ್ಲದ ಪ್ರಯಾಣವನ್ನು ನಿಲ್ಲಿಸಬೇಕು ಎಂದು ಸರ್ಕಾರ ಹೇಳಿದೆ.
ಐಸಿಎಂಆರ್ ನ ಇತ್ತೀಚಿನ ಸಿರೊ ಸರ್ವೆಯ ಬಗ್ಗೆ ಪ್ರಮುಖ ಅಂಶಗಳು ಇಲ್ಲಿವೆ:
ಜನಸಂಖ್ಯೆಯ ಮೂರನೇ ಒಂದು ಭಾಗವು SARS-CoV-2 ಪ್ರತಿಕಾಯಗಳನ್ನು ಹೊಂದಿರಲಿಲ್ಲ, ಅಂದರೆ ಸುಮಾರು 40 ಕೋಟಿ ಜನರು ಇನ್ನೂ COVID-19 ಸೋಂಕಿಗೆ ಗುರಿಯಾಗುತ್ತಾರೆ.
ಸರ್ಕಾರದ ಪ್ರಕಾರ, ಸಮೀಕ್ಷೆಯಲ್ಲಿ 85 ಪ್ರತಿಶತದಷ್ಟು ಆರೋಗ್ಯ ಕಾರ್ಯಕರ್ತರು SARS-CoV-2 ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದರು. ಹತ್ತನೇ ಒಂದು ಭಾಗದಷ್ಟು HCW ಗಳು ಇನ್ನೂ ಲಸಿಕೆ ಪಡೆದಿಲ್ಲ.
ಸಮೀಕ್ಷೆಯಲ್ಲಿ 28,975 ಸಾಮಾನ್ಯ ಜನಸಂಖ್ಯೆ ಮತ್ತು 7,252 ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ.
ಹಿಂದಿನ ಮೂರು ಸಮೀಕ್ಷೆ ನಡೆಸಿದ 21 ರಾಜ್ಯಗಳ 70 ಜಿಲ್ಲೆಗಳಲ್ಲಿ ನಾಲ್ಕನೇ ಸುತ್ತಿನ ಸಮೀಕ್ಷೆಯನ್ನು ನಡೆಸಲಾಗಿದೆ.
ಸಂಪೂರ್ಣವಾಗಿ ಲಸಿಕೆ ಹಾಕಿದರೆ ಮಾತ್ರ ಪ್ರಯಾಣ
COVID-19- ಸೂಕ್ತ ನಡವಳಿಕೆಯನ್ನು ಗಮನದಲ್ಲಿಟ್ಟುಕೊಂಡು, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಭೆಗಳನ್ನು ತಪ್ಪಿಸಬೇಕು ಮತ್ತು ಅನಿವಾರ್ಯವಲ್ಲದ ಪ್ರಯಾಣವನ್ನು ನಿಲ್ಲಿಸಬೇಕು ಎಂದು ಸರ್ಕಾರ ಹೇಳಿದ್ದು, ಸಂಪೂರ್ಣವಾಗಿ ಲಸಿಕೆ ಹಾಕಿದರೆ ಮಾತ್ರ ಪ್ರಯಾಣಿಸಬೇಕೆಂದು ತಿಳಿಸಲಾಗಿದೆ.
ಮೊದಲು ಪ್ರಾಥಮಿಕ ಶಾಲೆಗಳನ್ನು ಮತ್ತೆ ತೆರೆಯಬೇಕು
ಮಕ್ಕಳು ವೈರಲ್ ಸೋಂಕನ್ನು ಉತ್ತಮವಾಗಿ ನಿಭಾಯಿಸಬಲ್ಲ ಕಾರಣ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವುದನ್ನು ಪರಿಗಣಿಸುವುದು ಜಾಣತನ ಎಂದು ಐಸಿಎಂಆರ್ ಸೂಚಿಸಿದೆ. ಮಕ್ಕಳು ವೈರಲ್ ಸೋಂಕನ್ನು ಉತ್ತಮವಾಗಿ ನಿಭಾಯಿಸಬಹುದು. ಆದ್ದರಿಂದ ಒಮ್ಮೆ ನಿರ್ಧಾರ ತೆಗೆದುಕೊಂಡು ಎಲ್ಲಾ ಸಿಬ್ಬಂದಿಗೆ ಲಸಿಕೆ ಹಾಕಿದರೆ ಮೊದಲು ಪ್ರಾಥಮಿಕ ಶಾಲೆಗಳನ್ನು ತೆರೆಯುವುದು ಜಾಣತನವಾಗುತ್ತದೆ ಎಂದು ಹೇಳಲಾಗಿದೆ.