ಜರ್ಮನಿಯ ಅಲೆಕ್ಸಾಂಡ್ರಾ ಹಿಲ್ಡೆಬ್ರಾಂಡ್ (66) ಎಂಬ ಮಹಿಳೆ ತಮ್ಮ 10ನೇ ಮಗುವಿಗೆ ಜನ್ಮ ನೀಡುವ ಮೂಲಕ ವೈದ್ಯಲೋಕವನ್ನೇ ಬೆರಗಾಗಿಸಿದ್ದಾರೆ. ಮಾರ್ಚ್ 19ರಂದು ಚಾರಿಟೆ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಮೂಲಕ ಫಿಲಿಪ್ ಎಂಬ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
45 ವರ್ಷಗಳ ಹಿಂದೆ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದ ಅಲೆಕ್ಸಾಂಡ್ರಾ, ಬಳಿಕ 50ರ ಹರೆಯದಲ್ಲಿ 8 ಮಕ್ಕಳನ್ನು ಹೆರುವ ಮೂಲಕ ತಾಯ್ತನದ ಪಯಣ ಮುಂದುವರೆಸಿದ್ದಾರೆ. ಅವರ ಹಿರಿಯ ಮಗಳು ಸ್ವೆಟ್ಲಾನಾಗೆ 45 ವರ್ಷ, ಆರ್ಟಿಯೋಮ್‌ಗೆ 36 ವರ್ಷ. ಎಲಿಜಬೆತ್ ಹಾಗೂ ಮ್ಯಾಕ್ಸಿಮಿಲಿಯನ್ ಅವಳಿ ಮಕ್ಕಳಿಗೆ 12 ವರ್ಷ, ಅಲೆಕ್ಸಾಂಡ್ರಾಗೆ 10 ವರ್ಷ, ಲಿಯೋಪೋಲ್ಡ್‌ಗೆ 8 ವರ್ಷ, ಅನ್ನಾಗೆ 7 ವರ್ಷ, ಮರಿಯಾಗೆ 4 ವರ್ಷ ಹಾಗೂ ಕಥರೀನಾಗೆ 2 ವರ್ಷ. ಅಲೆಕ್ಸಾಂಡ್ರಾ ಫರ್ಟಿಲಿಟಿ ಚಿಕಿತ್ಸೆ ಇಲ್ಲದೇ ಸಹಜವಾಗಿಯೇ ಗರ್ಭ ಧರಿಸಿದ್ದಾರೆ.
ಆರೋಗ್ಯಕರ ಜೀವನಶೈಲಿ, ನಿಯಮಿತ ವ್ಯಾಯಾಮದಿಂದ ಇದು ಸಾಧ್ಯವಾಯ್ತು ಎನ್ನುತ್ತಾರೆ. ಚಾರಿಟೆ ಆಸ್ಪತ್ರೆಯ ಪ್ರೊಫೆಸರ್ ವೋಲ್ಫ್‌ಗ್ಯಾಂಗ್ ಹೆನ್ರಿಚ್ ಈ ಪ್ರಕರಣವನ್ನು “ವೈದ್ಯಕೀಯ ಇತಿಹಾಸದಲ್ಲಿ ಅಪರೂಪ” ಎಂದಿದ್ದಾರೆ. ಕೊಲಂಬಿಯಾ ವಿಶ್ವವಿದ್ಯಾಲಯದ ಡಾ. ಅಲೆಕ್ಸ್ ರೋಬ್ಲೆಸ್, 45 ವರ್ಷಗಳ ನಂತರ ಸಹಜ ಗರ್ಭಧಾರಣೆ 5% ಕ್ಕಿಂತ ಕಡಿಮೆ ಎಂದು ಎಚ್ಚರಿಸಿದ್ದಾರೆ.